ನವದೆಹಲಿ : ಅತ್ಯಾಚಾರ ಅಥವಾ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಸಂತ್ರಸ್ತ ಮಹಿಳೆಗೆ ಕನ್ಯಾತ್ವ ನಡೆಸುವುದು ಕಂಡು ಬಂದರೆ ಅವರು ದುರ್ನಡತೆಯ ಅಪರಾಧಿಯಾಗುತ್ತಾರೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಈ ಬಗ್ಗೆ ಇಂದು ನ್ಯಾ.ಡಿ.ವೈ ಚಂದ್ರಚೂಡ್ ಮತ್ತು ಹಿಮಾ ಕೊಹ್ಲಿ ಅವರ ವಿಭಾಗೀಯ ಪೀಠ ಈ ಮಹತ್ವದ ಆದೇಶ ನೀಡಿದೆ.
ಇಂದಿಗೂ ಇಂತಹ ಪರೀಕ್ಷೆಗಳನ್ನು ನಡೆಸುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಪೀಠ, ಇದು ಯಾವುದೇ ವೈಜ್ಞಾನಿಕ ಆಧಾರವನ್ನು ಹೊಂದಿಲ್ಲ. ಆದರೂ ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರಿಗೆ ಈ ಪರೀಕ್ಷೆ ನಡೆಯುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತು.
ಸಂತ್ರಸ್ತೆಯ ಲೈಂಗಿಕ ಹಿನ್ನೆಲೆ ಅಥವಾ ಇತಿಹಾಸ ಸಾಕ್ಷ್ಯವು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಲ್ಲ. ಆದರೆ ಇಂದಿಗೂ ಸಹ ಕನ್ಯಾತ್ವ ಪರೀಕ್ಷೆ ನಡೆಸಲ್ಪಡುತ್ತಿರುವುದು ವಿಷಾದನೀಯವಾಗಿದೆ.
ಈ ಪರೀಕ್ಷೆಯು ಯಾವುದೇ ವೈಜ್ಞಾನಿಕ ಆಧಾರವನ್ನು ಹೊಂದಿಲ್ಲ, ಬದಲಿಗೆ ಅದು ಮಹಿಳೆಯರನ್ನು ಪುನಃ ಬಲಿಪಶುಗೊಳಿಸುತ್ತದೆ ಮತ್ತು ಮರು ಆಘಾತಗೊಳಿಸುತ್ತದೆ ಎಂದು ಕೋರ್ಟ್ ಹೇಳಿದೆ.