ಇಂಫಾಲ: ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಹಿನ್ನೆಲೆ ಸರ್ಕಾರ ಮಂಗಳವಾರದಿಂದ ರಾಜ್ಯದಲ್ಲಿ ಇಂಟರ್ನೆಟ್ ಸೇವೆಗಳ ಮೇಲೆ ನಿಷೇಧ ಹೇರಿದೆ.
ಮಣಿಪುರ ಸರ್ಕಾರ ಮಂಗಳವಾರ ಹೊರಡಿಸಿದ ನೋಟಿಸ್‌ನಲ್ಲಿ, ವಾಟ್ಸಾಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಟ್ವಿಟರ್‌ನಂತಹ ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ಮೂಲಕ ತಪ್ಪು ಮಾಹಿತಿ ಮತ್ತು ಸುಳ್ಳು ವದಂತಿಗಳನ್ನು ಹರಡುವುದನ್ನು ತಡೆಯಲು ಇಂಟರ್‌ನೆಟ್ ಸೇವೆಗಳ ಮೇಲೆ ನಿಷೇಧ ಹೇರಿದೆ.
ಮಣಿಪುರ ಸರ್ಕಾರದ ಆದೇಶದ ಪ್ರಕಾರ, ಸೆಪ್ಟೆಂಬರ್ 15 ರವರೆಗೆ ಇಂಟರ್ನೆಟ್ ನಿಷೇಧ ಮುಂದುವರಿಯುತ್ತದೆ.
"ಟೆಲಿಕಾಂ ಸೇವೆಗಳ ತಾತ್ಕಾಲಿಕ ಅಮಾನತು (ಸಾರ್ವಜನಿಕ ತುರ್ತು ಅಥವಾ ಸಾರ್ವಜನಿಕ ಸುರಕ್ಷತೆ) ನಿಯಮಗಳು, 2017 ರ ನಿಯಮ 2 ರ ಅಡಿಯಲ್ಲಿ ನೀಡಲಾದ ಅಧಿಕಾರಗಳನ್ನು ಚಲಾಯಿಸುವಾಗ, ಮೇಲಿನ ಪರಿಸ್ಥಿತಿಯು ಶಾಂತಿಯುತ ಸಹಬಾಳ್ವೆ ಮತ್ತು ಸಾರ್ವಜನಿಕ ಸುವ್ಯವಸ್ಥೆಯ ನಿರ್ವಹಣೆಗೆ ಗಂಭೀರ ಅಡಚಣೆಯನ್ನು ಉಂಟುಮಾಡುವ ಸಾಧ್ಯತೆಯಿದೆ ಎಂದು ಹೇಳಿದೆ.
ಅದರಂತೆ ಐದು ದಿನಗಳವರೆಗೆ ಮಣಿಪುರ ರಾಜ್ಯದ ಪ್ರಾದೇಶಿಕ ನ್ಯಾಯವ್ಯಾಪ್ತಿಯಲ್ಲಿ ಲೀಸ್ ಲೈನ್‌ಗಳು, ವಿಎಸ್‌ಎಟಿಗಳು, ಬ್ರಾಡ್‌ಬ್ಯಾಂಡ್‌ಗಳು ಮತ್ತು ವಿಪಿಎನ್ ಸೇವೆಗಳನ್ನು ಒಳಗೊಂಡಂತೆ ಇಂಟರ್ನೆಟ್ ಮತ್ತು ಮೊಬೈಲ್ ಡೇಟಾ ಸೇವೆಗಳ ತಾತ್ಕಾಲಿಕ ಅಮಾನತು/ನಿರ್ಬಂಧವನ್ನು ಹೇರಲಾಗಿದೆ ಎಂದು ಸೂಚನೆಯಲ್ಲಿ ತಿಳಿಸಲಾಗಿದೆ.