Publish Date: Thu, 27 May 2021 (17:54 IST)
Updated Date: Thu, 27 May 2021 (17:55 IST)
ಮೀರತ್ : ಉತ್ತರ ಪ್ರದೇಶದ ಸರ್ಧಾನಾ ಪ್ರದೇಶದ ಹಳ್ಳಿಯೊಂದರಲ್ಲಿ 11 ವರ್ಷದ ಬಾಲಕಿಗೆ ಕಿರುಕುಳ ನೀಡಿದ 60 ವರ್ಷದ ವ್ಯಕ್ತಿಗೆ ಚಪ್ಪಲಿಯಲ್ಲಿ ಹೊಡೆದು ಪಂಚಾಯತ್ ತಕ್ಕ ಶಿಕ್ಷೆ ವಿಧಿಸಿದೆ.
ಆರೋಪಿ ವ್ಯಕ್ತಿ ಬಾಲಕಿಯ ಪೋಷಕರು ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಆಕೆಯ ಮನೆಗೆ ನುಗ್ಗಿ ಲೈಂಗಿಕಕಿರುಕುಳ ನೀಡಿದ್ದಾನೆ. ಆತನನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಗ್ರಾಮ ಪಂಚಾಯತ್ ಗೆ ಒಪ್ಪಿಸಲಾಗಿದೆ. ಬಳಿಕ ಆತನಿಗೆ ಚಪ್ಪಲಿ, ಶೂಗಳಿಂದ ಥಳಿಸಿ ಊರಿನಿಂದ ಹೊರಹಾಕಲಾಗಿದೆ. ಬಳಿಕ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.