Publish Date: Sun, 12 Apr 2026 (11:22 IST)
Updated Date: Sun, 12 Apr 2026 (11:31 IST)
ಲಕ್ನೋ: ಕಳ್ಳತನ ಮಾಡಲು ವ್ಯಕ್ತಿಯೊಬ್ಬ ಕಿರು ಸಂಧಿಯಲ್ಲಿ ತಲೆ ತೂರಿಸಿಕೊಂಡಿದ್ದ. ಆದರೆ ಆತನ ತಲೆ ಸಿಕ್ಕಿ ಹಾಕಿಕೊಂಡಿತ್ತು. ಮುಂದೇನಾಯ್ತು ಎಂದು ತಿಳಿಯಲು ಇಲ್ಲಿರುವ ವಿಡಿಯೋ ನೋಡಿ.
ಇತ್ತೀಚೆಗೆ ಮನೆಯೊಂದರ ಎಕ್ಸಾಸ್ಟರ್ ಮೂಲಕ ತಲೆ ತೂರಿಸಿ ಕಳ್ಳತನ ಮಾಡಲು ಯತ್ನಿಸಿದ ಖದೀಮ ಕೊನೆಗೆ ಹೊರಗೂ ಹೋಗಲಾಗದೇ ಒಳಗೂ ಹೋಗಲಾಗದೇ ಸಿಕ್ಕಿಬಿದ್ದಿದ್ದ ಘಟನೆ ಓದಿರುತ್ತೀರಿ. ಅಂತಹದ್ದೇ ಒಂದು ಘಟನೆ ಇಲ್ಲಿ ನಡೆದಿದೆ.
ಇದು ನಡೆದಿರುವುದು ಉತ್ತರ ಪ್ರದೇಶದ ಗಾಝಿಯಾಬಾದ್ ನಲ್ಲಿ. ಕಳ್ಳನೊಬ್ಬ ಕ್ಲಿನಿಕ್ ಒಂದರಲ್ಲಿ ಕಳ್ಳತನ ಮಾಡಲು ಬರುತ್ತಾನೆ. ಶಟರ್ ಡೋರ್ ನ ಸಂಧಿಯಲ್ಲಿ ತಲೆ ತೂರಿಸಿದ್ದ ಆತನ ತಲೆ ಅಲ್ಲೇ ಲಾಕ್ ಆಗುತ್ತದೆ. ರಾತ್ರಿಯಿಡೀ ಇದೇ ಅವಸ್ಥೆಯಲ್ಲಿ ಆತ ಕಾಲಕಳೆಯುತ್ತಾನೆ.
ಬೆಳಿಗ್ಗೆ ಈತನನ್ನು ನೋಡಿದ ಸ್ಥಳೀಯರು ಅಗ್ನಿ ಶಾಮಕ ದಳದವರಿಗೆ ಮಾಹಿತಿ ನೀಡುತ್ತಾರೆ. ಬಳಿಕ ಅಗ್ನಿಶಾಮಕ ದಳ ಸಿಬ್ಬಂದಿ ಅದು ಹೇಗೋ ಮಾಡಿ ಆತನ ತಲೆ ಹೊರಗೆ ತರುವಲ್ಲಿ ಯಶಸ್ವಿಯಾಗುತ್ತಾರೆ. ಈ ವಿಡಿಯೋ ಇಲ್ಲಿದೆ ನೋಡಿ.