Publish Date: Mon, 31 Aug 2026 (09:24 IST)
Updated Date: Mon, 31 Aug 2026 (09:28 IST)
ನವದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಸಿಜೆಪಿ ಪ್ರತಿಭಟನೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಅವರ ದಿವಂಗತ ತಾಯಿಯವರ ವಿರುದ್ಧ ಆಕ್ಷೇಪಾರ್ಹ ಹಾಗೂ ಅವಮಾನಕರ ಭಾಷೆ ಬಳಸಿದ ಆರೋಪ ಎದುರಿಸಿದ್ದ ರುಚಿಕಾ ಸಿಂಗ್ ಮತ್ತೆ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದಾರೆ. ಈ ಹಿಂದೆ ಘಟನೆಯ ಬಳಿಕ ವಿಡಿಯೋ ಒಂದರ ಮೂಲಕ ಕ್ಷಮೆಯಾಚಿಸಿದ್ದ ಈ ಯುವತಿ, ಇದೀಗ ಮತ್ತೊಂದು ವಿಡಿಯೋ ಮೂಲಕ ಪ್ರಧಾನಿಯವರನ್ನೇ ಗುರಿಯಾಗಿಸಿ ಆಕ್ರೋಶ ಹೊರಹಾಕಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ.
ಆರಂಭದಲ್ಲಿ ರುಚಿಕಾ ಸಿಂಗ್ ಅವರ ನಿಂದನೀಯ ಹೇಳಿಕೆಗಳ ವಿಡಿಯೋ ವೈರಲ್ ಆದಾಗ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಆದರೆ, ಈ ವಿಷಯ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಅತ್ಯಂತ ಉದಾರ ಮನೋಭಾವವನ್ನು ವ್ಯಕ್ತಪಡಿಸಿದ್ದರು. "ಇವರು ದಾರಿ ತಪ್ಪಿದ ನಮ್ಮದೇ ಮಕ್ಕಳು, ಯುವಜನತೆಯ ವಿರುದ್ಧ ಯಾವುದೇ ಕಠಿಣ ಕಾನೂನು ಕ್ರಮ ಕೈಗೊಳ್ಳಬಾರದು" ಎಂದು ವಿನಂತಿಸಿಕೊಂಡಿದ್ದರು. ದೇಶದ ಪ್ರಧಾನಿಯೊಬ್ಬರು ತಮಗೆ ಹಾಗೂ ತಮ್ಮ ದಿವಂಗತ ತಾಯಿಗೆ ಆದ ಅಪಮಾನವನ್ನು ಬದಿಗಿಟ್ಟು ತೋರಿದ ಈ ಕ್ಷಮಾ ಗುಣ ಮತ್ತು ಪೋಷಕ ಸ್ಥಾನದ ಕಾಳಜಿ ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಮೆಚ್ಚುಗೆಗೆ ಪಾತ್ರವಾಗಿತ್ತು.
ಕ್ಷಮೆಯಾಚನೆಯಿಂದ ಮತ್ತೆ ಆಕ್ರೋಶದ ಹಾದಿಗೆಪ್ರಧಾನಿಯವರ ವಿನಂತಿಯ ನಂತರ ಪೊಲೀಸ್ ಕ್ರಮಗಳು ತಣ್ಣಗಾಗಿದ್ದವು ಮತ್ತು ರುಚಿಕಾ ಸಿಂಗ್ ಕೂಡ ತಾವು ಪ್ರಭಾವಕ್ಕೆ ಒಳಗಾಗಿ ಹಾಗೆ ಮಾತನಾಡಿದ್ದಾಗಿ ಕ್ಷಮೆ ಕೇಳಿದ್ದರು. ಆದರೆ ಇದೀಗ ಹೊರಬಿದ್ದಿರುವ ಹೊಸ ವಿಡಿಯೋದಲ್ಲಿ ಅವರ ಭಾಷೆ ಮತ್ತು ಧೋರಣೆ ಸಂಪೂರ್ಣವಾಗಿ ಬದಲಾಗಿದೆ:
ಹೊಸ ವಿಡಿಯೋದಲ್ಲಿ ಅವರು ತಾವು ಇನ್ನು ಮುಂದೆ ಹಿಂದೆ ಸರಿಯುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ಪ್ರಧಾನಿಯವರನ್ನು "ಹೇಡಿ" ಎಂದು ಕರೆಯುತ್ತಾ, ತಮ್ಮ ಇಂದಿನ ಸ್ಥಿತಿಗೆ ಮತ್ತು ಕಷ್ಟಗಳಿಗೆ ಪ್ರಧಾನಿಯವರೇ ಕಾರಣ ಎಂದು ನೇರವಾಗಿ ನಿಂದಿಸಿದ್ದಾರೆ. ಪ್ರಧಾನಿ ತೋರಿದ ಕ್ಷಮಾ ಗುಣವನ್ನು ಗೌರವಿಸದೆ, ಮತ್ತೆ ಅಂತಹದ್ದೇ ಭಾಷೆಯನ್ನು ಬಳಸಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ.
ಪ್ರಜಾಪ್ರಭುತ್ವದಲ್ಲಿ ಸರ್ಕಾರದ ಅಥವಾ ನಾಯಕರ ವಿರುದ್ಧ ಪ್ರತಿಭಟಿಸುವ ಮತ್ತು ವಿಮರ್ಶಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಆದರೆ, ವಿಮರ್ಶೆ ಮತ್ತು ವೈಯಕ್ತಿಕ ನಿಂದನೆಯ ನಡುವೆ ಇರುವ ಗೆರೆಯನ್ನು ಮರೆಯುವುದು ಕಳವಳಕಾರಿ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ