Publish Date: Thu, 13 Aug 2026 (10:34 IST)
Updated Date: Thu, 13 Aug 2026 (10:39 IST)
ಪ್ರಾಣಿಗಳು ಮತ್ತು ಮಾನವರ ನಡುವಿನ ಬಾಂಧವ್ಯ ಹಾಗೂ ಹೊಂದಾಣಿಕೆಯನ್ನು ತೋರಿಸುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ್ಗೆ ಸದ್ದು ಮಾಡುತ್ತಿರುತ್ತವೆ. ಆದರೆ ಇಲ್ಲೊಂದು ವಿಡಿಯೋ ನೆಟ್ಟಿಗರ ಮನ ಗೆದ್ದಿದ್ದು, ಪ್ರಾಣಿಗಳಿಗೂ ಮಾನವರ ಆಧುನಿಕ ತಂತ್ರಜ್ಞಾನದ ಮೇಲೆ ಎಷ್ಟು ಕುತೂಹಲವಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಆರಾಮಾಗಿ ಮಂಚದ (ಚಾರ್‌ಪಾಯ್) ಮೇಲೆ ಮಲಗಿ ಮೊಬೈಲ್ ಗೇಮ್ ಆಡುತ್ತಿದ್ದ ಬಾಲಕನ ಪಕ್ಕದಲ್ಲಿ ಕೋತಿಯೊಂದು ಬಂದು ಕುಳಿತು, ಮನುಷ್ಯರಂತೆಯೇ ಗೇಮ್ ವೀಕ್ಷಿಸಿರುವ ಅಪರೂಪದ ದೃಶ್ಯ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ಸಾಮಾನ್ಯವಾಗಿ ಕೋತಿಗಳು ಪಕ್ಕದಲ್ಲಿ ಬಂದರೆ ಯಾವುದೇ ಮಗು ಅಥವಾ ದೊಡ್ಡವರು ಹೆದರಿ ಓಡುವುದು ಅಥವಾ ಕೋತಿಯನ್ನು ಬೆದರಿಸುವುದು ಸಹಜ. ಆದರೆ ಈ ವೀಡಿಯೋದಲ್ಲಿ ಬಾಲಕ ಸ್ವಲ್ಪವೂ ಹೆದರದೆ ತನ್ನಷ್ಟಕ್ಕೆ ತಾನು ಗೇಮ್ ಆಡುವುದನ್ನು ಮುಂದುವರಿಸಿದ್ದಾನೆ.
ಮತ್ತೊಂದೆಡೆ, ಕೋತಿಯು ಯಾವುದೇ ರೀತಿಯ ಚೇಷ್ಟೆ ಅಥವಾ ಹಾರಾಟ ನಡೆಸದೆ, ಅತ್ಯಂತ ಶಾಂತವಾಗಿ ಬಾಲಕನ ಪಕ್ಕದಲ್ಲೇ ಕುಳಿತುಕೊಂಡಿದೆ. ಬಾಲಕನ ಫೋನ್ ಸ್ಕ್ರೀನ್‌ನತ್ತಲೇ ಕಣ್ಣಿಟ್ಟಿದ್ದ ಕಪಿರಾಯ, ಗೇಮ್‌ನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಅತ್ಯಂತ ಏಕಾಗ್ರತೆ ಹಾಗೂ ಕುತೂಹಲದಿಂದ ವೀಕ್ಷಿಸಿದೆ. ಇದನ್ನು ನೋಡಿದ ಯಾರೇ ಆದರೂ 'ಇದು ಪ್ರಾಣಿಯೋ ಅಥವಾ ಗೇಮಿಂಗ್ ಪ್ರೇಮಿಯೋ?' ಎಂದು ಆಶ್ಚರ್ಯ ಪಡದಿರಲು ಸಾಧ್ಯವಿಲ್ಲ. ಪ್ರಾಣಿಗಳು ಮನುಷ್ಯರ ಜೀವನಶೈಲಿಗೆ ಎಷ್ಟು ಮುದ್ದಾಗಿ ಹೊಂದಿಕೊಳ್ಳುತ್ತವೆ ಎಂಬುದಕ್ಕೆ ಈ ವಿಡಿಯೋ ಅತ್ಯುತ್ತಮ ಉದಾಹರಣೆಯಾಗಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ