Publish Date: Thu, 19 Mar 2026 (09:41 IST)
Updated Date: Thu, 19 Mar 2026 (09:44 IST)
ರೇಬಿಸ್ ಬಂದ ವ್ಯಕ್ತಿಗಳಿಗೆ ನೀರು ಕಂಡರೆ ಭಯವಿರುತ್ತದೆ. ನೀರು ಹತ್ತಿರ ತಂದರೆ ಅವರು ಎಷ್ಟು ನಡುಗುತ್ತಾರೆ ಎಂಬುದಕ್ಕೆ ಈ ವಿಡಿಯೋವೇ ಸಾಕ್ಷಿ.
ನಮ್ಮ ದೇಶದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಪ್ರತಿನಿತ್ಯ ಎಷ್ಟೋ ಜನ ನಾಯಿ ಕಡಿತಕ್ಕೊಳಗಾಗುತ್ತಾರೆ. ಬೀದಿ ನಾಯಿ ಮಾತ್ರವಲ್ಲ ಸಾಕು ನಾಯಿಯೇ ಆಗಿದ್ದರೂ ಸರಿಯಾದ ಸಮಯಕ್ಕೆ ಇಂಜೆಕ್ಷನ್ ಕೊಡದೇ ಇದ್ದಲ್ಲಿ ಅಂತಹ ನಾಯಿಗಳು ಕಚ್ಚಿದರೆ ಅಪಾಯಕಾರಿಯೇ.
ಯಾವುದೇ ನಾಯಿ, ಬೆಕ್ಕು ಕಚ್ಚಿದರೂ ತಕ್ಷಣವೇ ವೈದ್ಯರ ಬಳಿ ಹೋಗಿ ಇಂಜೆಕ್ಷನ್ ಪಡೆಯಬೇಕಾಗುತ್ತದೆ. ಇಲ್ಲದೇ ಹೋದರೆ ರೇಬಿಸ್ ರೋಗ ಬರುವ ಅಪಾಯವಿರುತ್ತದೆ. ರೇಬಿಸ್ ಅತ್ಯಂತ ಅಪಾಯಕಾರಿ ರೋಗವಾಗಿದ್ದು ವ್ಯಕ್ತಿಯ ಅತ್ಯಂತ ಧಾರುಣ ಹಂತಕ್ಕೆ ತಲುಪಿ ಸಾವನ್ನಪ್ಪುತ್ತಾನೆ.
ರೇಬಿಸ್ ಗೆ ತುತ್ತಾದವರಿಗೆ ನೀರಿನ ಭಯವಿರುತ್ತದೆ. ನೀರು ಹತ್ತಿರ ತಂದರೆ ಎಷ್ಟು ಭಯಪಡುತ್ತಾರೆ ಎನ್ನುವುದಕ್ಕೆ ರೇಬಿಸ್ ಗೊಳಗಾದ ವ್ಯಕ್ತಿಯ ಈ ವಿಡಿಯೋವೇ ಸಾಕ್ಷಿಯಾಗಿದೆ. ನೀರಿನ ಲೋಟ ಹತ್ತಿರ ತಂದ ತಕ್ಷಣ ಆತ ಭಯದಿಂದ ನಡುಗುತ್ತಾನೆ. ಹೇಗೋ ಒಂದು ಸಿಪ್ ಪಾನೀಯವನ್ನು ಭಯಪಡುತ್ತಲೇ ಸೇವಿಸುತ್ತಾನೆ. ಈತನ ಪರಿಸ್ಥಿತಿ ನೋಡಿದರೆ ನಿಜಕ್ಕೂ ಮರುಕವೆನಿಸುತ್ತದೆ. ಹೀಗಾಗಿ ನಾಯಿ, ಬೆಕ್ಕು ಏನೇ ಕಚ್ಚಿದರೂ ತಕ್ಷಣವೇ ಇಂಜೆಕ್ಷನ್ ಪಡೆದು ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ.