Publish Date: Mon, 03 Aug 2026 (15:39 IST)
Updated Date: Mon, 03 Aug 2026 (15:43 IST)
ಇಲ್ಲಿನ ಬೆತ್ವಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಚೆಕ್ ಡ್ಯಾಂ (ಸ್ಟಾಪ್ ಡ್ಯಾಂ)ನ ಸಿಮೆಂಟ್ ಪಿಲ್ಲರ್‌ಗಳ ಆಸರೆಯಲ್ಲೇ ಸಣ್ಣ ಮಕ್ಕಳು ತಮ್ಮ ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ಶಾಲೆಗೆ ತೆರಳುವ ವಿಡಿಯೋವೊಂದು ವೈರಲ್ ಆಗಿದೆ.
ಮಧ್ಯಪ್ರದೇಶದ ವಿದಿಶಾ ಜಿಲ್ಲೆಯ ಆಘಾತಕಾರಿ ಘಟನೆ ನಡೆದಿದೆ. ಶಾಲೆ ತಲುಪಲು ಈ ಪುಟ್ಟ ಮಕ್ಕಳು ಒಂದು ಪಿಲ್ಲರ್‌ನಿಂದ ಇನ್ನೊಂದು ಪಿಲ್ಲರ್‌ಗೆ ಪ್ರಾಣ ಕೈಯಲ್ಲಿ ಹಿಡಿದುಕೊಂಡು ಜಿಗಿಯುತ್ತಾರೆ. ಇದರಿಂದಾಗಿ ಭೋರ್ಗರೆಯುವ ನದಿಯ ವೇಗದ ಹರಿವಿನಲ್ಲಿ ಬಿದ್ದು ಜೀವ ಕಳೆದುಕೊಳ್ಳುವ ಗಂಭೀರ ಅಪಾಯ ಎದುರಾಗಿದೆ.
ಈ ಪ್ರದೇಶವು ಕೇಂದ್ರ ಸಚಿವರು ಮತ್ತು ಘಟಾನುಘಟಿ ನಾಯಕರ ಲೋಕಸಭಾ ಕ್ಷೇತ್ರವಾಗಿದ್ದರೂ, ಮೂಲಭೂತ ಸೌಕರ್ಯಗಳು ಮತ್ತು ಸೇತುವೆಯ ಕೊರತೆಯನ್ನು ಕಂಡು ಸ್ಥಳೀಯ ಆಡಳಿತದ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇಷ್ಟು ಅಪಾಯಕಾರಿಯಾಗಿ ಮಕ್ಕಳು ಹೋದರೆ ಅವರ ಜೀವಕ್ಕೆ ಏನಾದರೂ ಆದರೆ ಯಾರು ಹೊಣೆ? ರಾಜಕಾರಣಿಗಳು ಇತ್ತ ಗಮನಹರಿಸುವುದಿಲ್ಲ ಯಾಕೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ