Publish Date: Mon, 20 Jul 2026 (14:31 IST)
Updated Date: Mon, 20 Jul 2026 (14:38 IST)
ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸಭ್ಯತೆ ಮತ್ತು ನೈತಿಕತೆಯ ಗಡಿಗಳು ಮಸುಕಾಗುತ್ತಿವೆಯೇ ಎಂಬ ಆತಂಕ ಸಾರ್ವಜನಿಕರಲ್ಲಿ ಮೂಡುತ್ತಿದೆ. ಇದಕ್ಕೆ ಪೂರಕವೆಂಬಂತೆ, ಕ್ಯಾಬ್ ಒಂದರ ಹಿಂಬದಿಯ ಸೀಟಿನಲ್ಲಿ ಜೋಡಿಯೊಂದು ಸಾರ್ವಜನಿಕ ಸಭ್ಯತೆಯ ಎಲ್ಲ ಮಿತಿಗಳನ್ನು ಮೀರಿ ಅಸಭ್ಯವಾಗಿ ವರ್ತಿಸುತ್ತಿದ್ದಾಗ, ಅದನ್ನು ಸಹಿಸದ ಕ್ಯಾಬ್ ಚಾಲಕ ತಕ್ಕ ಪಾಠ ಕಲಿಸಿದ ಘಟನೆಯೊಂದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಜೋಡಿಯ ಈ ವರ್ತನೆಯಿಂದ ಮುಜುಗರಕ್ಕೊಳಗಾದ ಮತ್ತು ಆಕ್ರೋಶಗೊಂಡ ಚಾಲಕ, ತಕ್ಷಣವೇ ಗಾಡಿಯನ್ನು ನಿಲ್ಲಿಸಿ, "ನಿಮಗೆ ಬೇಕಿದ್ದರೆ ನಾನೇ ಹತ್ತಿರದಲ್ಲಿ ಒಂದು ಓಯೋ ರೂಮ್ ಬುಕ್ ಮಾಡಿಕೊಡಲೇ?" ಎಂದು ನೇರವಾಗಿಯೇ ಪ್ರಶ್ನಿಸಿದ್ದಾನೆ. ಚಾಲಕನ ಈ ಖಡಕ್ ಪ್ರಶ್ನೆ ಇಂದಿನ ಯುವ ಪೀಳಿಗೆಯ ಸಾಮಾಜಿಕ ಪ್ರಜ್ಞೆಯ ಬಗ್ಗೆ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯನ್ನು ಮೂಡಿಸಿದೆ.
ಈಗಿನ ಯುವಜನರಿಗೆ ನಾಚಿಕೆ ಎನ್ನುವ ವಿಚಾರವೇ ಗೊತ್ತಿಲ್ಲ. ಸಾರ್ವಜನಿಕವಾಗಿ ಹೇಗೆ ನಡೆದುಕೊಳ್ಳಬೇಕು ಎಂಬುದು ಗೊತ್ತಿಲ್ಲ ಎಂದು ಅವರ ಮುಂದೆಯೇ ಚಾಲಕ ಹಿಗ್ಗಾ ಮುಗ್ಗಾ ಬೈದುಕೊಳ್ಳುತ್ತಾನೆ.
ತಮ್ಮ ಕಣ್ಣೆದುರಲ್ಲೇ ನಡೆಯುತ್ತಿದ್ದ ಈ ಅಸಭ್ಯ ಕೃತ್ಯವನ್ನು ಸಹಿಸದ ಚಾಲಕ, ಅವರಿಗೆ ಬುದ್ಧಿ ಕಲಿಸಲು ಈ ರೀತಿ ಹೇಳಿರುವುದು ಸಾರ್ವಜನಿಕ ವಲಯದಲ್ಲಿ ಭಾರಿ ಬೆಂಬಲ ಗಳಿಸಿದೆ. "ನಾವು ಹಣ ನೀಡುತ್ತೇವೆ ಎಂದಾಕ್ಷಣ ಏನು ಬೇಕಾದರೂ ಮಾಡಲು ನಮಗೆ ಹಕ್ಕಿರುವುದಿಲ್ಲ" ಎಂಬುದನ್ನು ಈ ಚಾಲಕ ಮನವರಿಕೆ ಮಾಡಿಕೊಟ್ಟಿದ್ದಾನೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ