Publish Date: Thu, 18 Mar 2021 (09:02 IST)
Updated Date: Thu, 18 Mar 2021 (09:06 IST)
ಡೆಹ್ರಾಡೂನ್: ಹರಿದ ಜೀನ್ಸ್ ಪ್ಯಾಂಟ್ ತೊಡುವುದು ಇಂದಿನ ಫ್ಯಾಷನ್. ಆದರೆ ಈ ಬಗ್ಗೆ ಉತ್ತರಾಖಂಡ ಸಿಎಂ ತಿರಾತ್ ಸಿಂಗ್ ರಾವತ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹರಿದ ಜೀನ್ಸ್ ತೊಡುವುದು ಆಧುನಿಕ ಸಮಾಜದಲ್ಲಿ ಸಾಮಾಜಿಕ ಅಧಃಪತನದ ಸಂಕೇತ ಎಂದು ತಿರಾತ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ಇದೆಂಥಾ ಸಂಸ್ಕೃತಿ ಎಂದು ಅವರು ಲೇವಡಿ ಮಾಡಿದ್ದಾರೆ.
ಮೊಣಕಾಲು ಕಾಣುವ ಹಾಗೆ ಚಿಂದಿ ಜೀನ್ಸ್ ತೊಡುವುದು ಮತ್ತು ಶ್ರೀಮಂತರಂತೆ ತೋರಿಸಿಕೊಳ್ಳುವುದು- ಇತ್ತೀಚೆಗೆ ಯುವಜನಾಂಗಕ್ಕೆ ಇಂಥಾ ಸಂಸ್ಕೃತಿಯನ್ನೇ ಹೇಳಿಕೊಡಲಾಗುತ್ತದೆ. ಇವೆಲ್ಲಾ ಮನೆಯಿಂದಲ್ಲದೆ ಬೇರೆ ಎಲ್ಲಿಂದ ಬರಲು ಸಾಧ್ಯ? ಯುವತಿಯರೂ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಪಾಶ್ಚಿಮಾತ್ಯರು ನಮ್ಮ ಸಂಸ್ಕೃತಿಯನ್ನು ಕಲಿಯುತ್ತಿದ್ದಾರೆ.ಆದರೆ ನಾವು ನಗ್ನತೆಯ ಹಿಂದೆ ಓಡುತ್ತಿದ್ದೇವೆ. ಇದೆಲ್ಲಾ ಮನೆಯಲ್ಲಿ ಉತ್ತಮ ಸಂಸ್ಕಾರ ಹೇಳಿಕೊಡದೇ ಇರುವುದರ ಫಲ ಎಂದು ನೂತನ ಸಿಎಂ ಹೇಳಿದ್ದಾರೆ.