Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬು ಬಳಕೆ: ಟಿಟಿಡಿ ಅಧೀನದ ದೇವಾಲಯದಲ್ಲಿ ಪವಿತ್ರೋತ್ಸವ

ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬು ಬಳಕೆ: ಟಿಟಿಡಿ ಅಧೀನದ ದೇವಾಲಯದಲ್ಲಿ ಪವಿತ್ರೋತ್ಸವ

Sampriya

ತಿರುಮಲ , ಶುಕ್ರವಾರ, 27 ಸೆಪ್ಟಂಬರ್ 2024 (14:56 IST)
ತಿರುಮಲ: ತಿರುಪತಿ ತಿರುಮಲ ದೇವಸ್ಥಾನದ ಲಡ್ಡು ಪ್ರಸಾದಕ್ಕೆ ಪ್ರಾಣಿಗಳ ಕೊಬ್ಬು ಮಿಶ್ರಣ ವಿವಾದಕ್ಕೆ ಸಂಬಂಧಿಸಿದಂತೆ ಟಿಟಿಡಿ ಅಧೀನದ ದೇವಾಲಯದಲ್ಲಿ ಮತ್ತೆ ಶುದ್ಧೀಕರಣ ಕಾರ್ಯ ನಡೆಯುತ್ತಿದೆ. ನಾಲ್ಕು ದಿನ ನಡೆಯುವ ಪವಿತ್ರೋತ್ಸವಕ್ಕೆ ಶುಕ್ರವಾರ ಚಾಲನೆ ನೀಡಲಾಗಿದೆ.

ತಿರುಪತಿ ತಿರುಮಲ ದೇವಸ್ಥಾನಂ ದೇಗುಲದ ಪಾವಿತ್ರ್ಯತೆಗೆ ಧಕ್ಕೆಯಾದ ಹಿನ್ನೆಲೆಯಲ್ಲಿ ಇಂದಿನಿಂದ ಸೋಮವಾರದವರೆಗೆ, ಪ್ರತಿ ದಿನ ಸಂಜೆ 6:30 ರ ಹೊತ್ತಿಗೆ ಶುದ್ಧಿಕಾರ್ಯ ನಡೆಯಲಿದೆ. ಬೆಂಗಳೂರಿನ ವೈಯಾಲಿಕಾವಲ್‌ನಲ್ಲಿರುವ ಟಿಟಿಡಿ ದೇವಾಲಯದಲ್ಲೂ ಶುದ್ಧಿಕಾರ್ಯ ನಡೆಯಲಿದೆ.

ಮೊದಲ ದಿನ ಆಚಾರ್ಯವರನಮ್, ಎರಡನೇ ದಿನ ಹೋಮ, ಮೂರನೇ ದಿನ ಪವಿತ್ರ ಸಮರ್ಪಣ ಮತ್ತು ನಾಲ್ಕನೇ ದಿನ ಪವಿತ್ರೋತ್ಸವ ನಡೆಸಲಾಗುವುದು. ಈ ಕಾರ್ಯಕ್ರಮಗಳಿಗೆ ತಿರುಪತಿಯಿಂದ 10 ಅರ್ಚಕರು ಬೆಂಗಳೂರಿಗೆ ಆಗಮಿಸಲಿದ್ದಾರೆ. ಅರ್ಚಕರು ಮೂರು ದಿನದ‌ ಪೂಜೆ, ಹೋಮ, ಹವನ ಮಾಡಲಿದ್ದಾರೆ.

ಟಿಟಿಡಿ ದೇವಾಲಯದಲ್ಲಿ ಅಗ್ನಿಕುಂಡ ಹೋಮಕುಂಡಗಳ ತಯಾರಿ ಮಾಡಿಕೊಳ್ಳಲಾಗಿದೆ. ಪವಿತ್ರೋತ್ಸವ ಶುದ್ಧಿ ಕಾರ್ಯದಲ್ಲಿ ದೇವಾಲಯದ ಆಡಳಿತ ಮಂಡಳಿ ಭಕ್ತರಿಗೂ ಅವಕಾಶ ನೀಡಿದೆ. ಇಬ್ಬರು ₹ 1 ಸಾವಿರ ರಶೀದಿ ಪಡೆದು ಪೂಜೆಯಲ್ಲಿ ಭಾಗಿಯಾಗಲು ಕಲ್ಪಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯಪಾಲರು ಆಡಳಿತದಲ್ಲಿ ಕೈ ಹಾಕಬಾರದು: ಸಿಎಂ ಸಿದ್ದರಾಮಯ್ಯ