ಲಕ್ನೋ: ಪ್ರಧಾನಿ ಮೋದಿಯವರು ಸೆಪ್ಟೆಂಬರ್ 17 ರಂದು ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಆದರೆ ಉತ್ತರಪ್ರದೇಶ ಸರ್ಕಾರ ಈ ದಿನ ಭಾನುವಾರವಾದರೂ ತನ್ನ ರಾಜ್ಯದ ಪ್ರಾಥಮಿಕ ಶಾಲಾ ಮಕ್ಕಳಿಗೆ ಹಾಜರಿ ಕಡ್ಡಾಯ ಎಂದು ಘೋಷಣೆ ಮಾಡಿದೆ.
ಭಾನುವಾರವಾದರೂ ಪ್ರಾಥಮಿಕ ಶಾಲಾ ಮಕ್ಕಳು ಅಂದು ಕಡ್ಡಾಯವಾಗಿ ಶಾಲೆಗೆ ಹಾಜರಾಗಬೇಕು. ಪ್ರಧಾನಿ ಜನ್ಮದಿನದ ಅಂಗವಾಗಿ ಅಂದು ಉತ್ತರ ಪ್ರದೇಶ ಸರ್ಕಾರ ಸ್ವಚ್ಛತಾ ಕಾರ್ಯಕ್ರಮ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ತನ್ನ ನಾಯಕನ ಜನ್ಮದಿನವನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸುತ್ತಿರುವುದಕ್ಕೆ ಹಲವೆಡೆಯಿಂದ ಟೀಕೆಗಳೂ ವ್ಯಕ್ತವಾಗಿದೆ. ಸಿಎಂ ಯೋಗಿ ಆದಿತ್ಯನಾಥ್ ಆದೇಶದಂತೆ ಹಲವು ಸರ್ಕಾರಿ ಶಾಲೆಗಳನ್ನು ದತ್ತು ಪಡೆದ ಶಾಸಕರೂ ತಾವು ದತ್ತುಪಡೆದ ಶಾಲೆಗಳಿಗೆ ಹೋಗಿ ಸ್ವಚ್ಛತಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಯೋಗಿ ಸರ್ಕಾರದ ಈ ಕ್ರಮ ವ್ಯಾಪಕ ಆಕ್ಷೇಪಕ್ಕೆ ಗುರಿಯಾಗಿದೆ.