Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಒಂದೇ ದಿನ 100 ಪೊಲೀಸರನ್ನು ಸಸ್ಪೆಂಡ್ ಮಾಡಿದ ಉ.ಪ್ರ. ಸಿಎಂ ಯೋಗಿ!

ಒಂದೇ ದಿನ 100 ಪೊಲೀಸರನ್ನು ಸಸ್ಪೆಂಡ್ ಮಾಡಿದ ಉ.ಪ್ರ. ಸಿಎಂ ಯೋಗಿ!
Luknow , ಶುಕ್ರವಾರ, 24 ಮಾರ್ಚ್ 2017 (09:50 IST)
ಲಕ್ನೋ: ಉತ್ತರ ಪ್ರದೇಶಕ್ಕೆ ಸಿಎಂ ಆದ ಮೇಲೆ ಯೋಗಿ ಆದಿತ್ಯನಾಥ್ ಚುರುಕಿನಿಂದ ಕೆಲಸ ಮಾಡುತ್ತಿದ್ದು, ಒಂದೇ ದಿನಕ್ಕೆ 100 ಭ್ರಷ್ಟ ಪೊಲೀಸರನ್ನು ಅಮಾನತುಗೊಳಿಸಿದ್ದಾರೆ.

 

ಸಿನಿಮಾ ನಾಯಕನ ರೀತಿಯಲ್ಲಿ ದಿಡೀರ್ ಆಗಿ ಠಾಣೆಗೆ ಭೇಟಿಯಿತ್ತು, ಕರ್ತವ್ಯ ಲೋಪವೆಸಗುತ್ತಿರುವವರನ್ನು ಸ್ಥಳದಲ್ಲಿಯೇ ಅಮಾನತುಗೊಳಿಸಿದ್ದಾರೆ. ಗೃಹ ಖಾತೆಯನ್ನೂ ಹೊಂದಿರುವ ಸಿಎಂ ಕ್ರಮದಿಂದ ಪೊಲೀಸ್ ಇಲಾಖೆಗೆ ಬಿಸಿ ಮುಟ್ಟಿದೆ.

 
ವಿಶೇಷವೆಂದರೆ ಅಮಾನತುಗೊಂಡವರಲ್ಲಿ ಕೇವಲ ಸಾಮಾನ್ಯ ದರ್ಜೆಯ ಪೇದೆಗಳು ಮಾತ್ರವಲ್ಲ, ಪೊಲೀಸ್ ಇನ್ಸ್ ಪೆಕ್ಟರ್ ಗಳೂ ಸೇರಿದ್ದಾರೆ. ಹಜರ್ ಗಂಜ್ ಠಾಣೆಗೆ ಬೆಳ್ಳಂ ಬೆಳಿಗ್ಗೆ ದಿಡೀರ್ ಭೇಟಿಯಿತ್ತ ಸಿಎಂ ಯೋಗಿ ಅಧಿಕಾರಿಗಳು ಬರುವ ಮೊದಲೇ ಖುರ್ಚಿಯಲ್ಲಿ ಕೂತಿದ್ದರು. ಇದರಿಂದಾಗಿ ಪೊಲೀಸರಿಗೆ ಮಂಡೆ ಬಿಸಿಯಾಗಿದ್ದಂತೂ ನಿಜ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

‘ಏರ್ ಇಂಡಿಯಾ ಸಿಬ್ಬಂದಿಗೆ 25 ಬಾರಿ ಚಪ್ಪಲಿ ಸೇವೆ ಮಾಡಿದೆ ಏನಿವಾಗ?’