ಮುಂಬೈ: ರಾಜಕಾರಣಿಗಳು ಅಧಿಕಾರದ ಮದದಲ್ಲಿ ಅಧಿಕಾರಿಗಳ ಮೇಲೆ ಕೈ ಮಾಡುವುದು ಹೊಸತೇನಲ್ಲ. ಆದರೆ ಶಿವಸೇನಾ ಸಂಸದ ರವೀಂದ್ರ ಗಾಯಕ್ವಾಡ್ ಏರ್ ಇಂಡಿಯಾ ಸಿಬ್ಬಂದಿಯನ್ನು ಚಪ್ಪಲಿಯಿಂದ ತುಳಿದ ಘಟನೆ ವರದಿಯಾಗಿದೆ.
ಪುಣೆಯಿಂದ ದೆಹಲಿಗೆ ಸಾಗುವ ಏರ್ ಇಂಡಿಯಾ ವಿಮಾನದಲ್ಲಿ ಈ ಘಟನೆ ನಡೆದಿದೆ. ಬ್ಯುಸಿನೆಸ್ ಕ್ಲಾಸ್ ನಲ್ಲಿ ಸೀಟು ಕೊಡಲಿಲ್ಲ ಎಂಬ ಕಾರಣಕ್ಕೆ ಡ್ಯೂಟಿ ಮ್ಯಾನೇಜರ್ ನನ್ನು ಚಪ್ಪಲಿಯಿಂದ ತುಳಿದು ದುಂಡಾವರ್ತನೆ ತೋರಿದ್ದಾರೆ.
ಸಂಪೂರ್ಣ ಎಕಾನಮಿ ಕ್ಲಾಸ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ರವೀಂದ್ರ ತನ್ನ ಬಳಿ ಓಪನ್ ಬ್ಯುಸಿನೆಸ್ ಟಿಕೆಟ್ ಇದೆ. ಬ್ಯುಸಿನೆಟ್ ಕ್ಲಾಸ್ ಸೀಟು ಕೊಡಿ ಎಂದು ಕೇಳಿದ್ದಾರೆ. ಇದನ್ನು ನಿರಾಕರಿಸಿದ ಸಿಬ್ಬಂದಿ ಜತೆ ವಾಗ್ವಾದದಲ್ಲಿ ತೊಡಗಿದ್ದಾರೆ. ನಾನೊಬ್ಬ ಸಂಸದ ನನ್ನ ವಿರುದ್ಧವೇ ಧ್ವನಿಯೇರಿಸಿ ಮಾತನಾಡುತ್ತೀಯಾ ಎಂದು ಗದರಿದ್ದಾರೆ. ಇದಕ್ಕೆ ಸಿಬ್ಬಂದಿ ಯಾವ ಸಂಸದ? ನಾನು ಪ್ರಧಾನಿ ಮೋದಿ ಬಳಿ ಮಾತನಾಡುತ್ತೇನೆ ಎಂದಿದ್ದಕ್ಕೆ ಸಿಬ್ಬಂದಿಗೆ ಕಾಲಲ್ಲಿರುವ ಚಪ್ಪಲಿ ಕೈಗೆ ತೆಗೆದುಕೊಂಡು ಮನಸೋ ಇಚ್ಛೆ ಥಳಿಸಿದ್ದಾರೆ.
ಘಟನೆಯ ನಂತರ ರವೀಂದ್ರ ಹೆಸರನ್ನು ಕಪ್ಪು ಪಟ್ಟಿಗೆ ಸೇರಿಸಿರುವ ಏರ್ ಇಂಡಿಯಾ, ಇನ್ನು ಮುಂದೆ ಅವರು ಸರ್ಕಾರಿ ಸ್ವಾಮ್ಯದ ವಿಮಾನದಲ್ಲಿ ಪ್ರಯಾಣಿಸದಂತೆ ಮಾಡಿದೆ. ಈ ಘಟನೆಯನ್ನು ಪಕ್ಷಬೇಧ ಮರೆತು ದೇಶದ ರಾಜಕಾರಣಿಗಳು ಖಂಡಿಸಿದ್ದಾರೆ.
ಇಷ್ಟೆಲ್ಲಾ ಆದ ಮೇಲೂ ತಮ್ಮ ವರ್ತನೆ ಬಗ್ಗೆ ಕನಿಷ್ಠ ಪಶ್ಚಾತ್ತಾಪವೂ ತೋರಿಸಿದ ರವೀಂದ್ರ, ನಾನು ಸಿಬ್ಬಂದಿಗೆ ಹೊಡೆದಿದ್ದು, ಒಂದು ಬಾರಿಯಲ್ಲ, 25 ಬಾರಿ ಹೊಡೆದಿದ್ದೇನೆ. ಆತ ಯಾರಿಗೆ ಬೇಕಾದರೂ, ದೂರು ನೀಡಲಿ. ನಾನು ಸ್ಪೀಕರ್ ಗೆ ದೂರು ನೀಡುತ್ತೇನೆ. ನಾನು ಬಿಜೆಪಿ ಸಂಸದನಲ್ಲ. ಶಿವಸೇನಾ ಸಂಸದ. ಯಾವುದೇ ಅವಮಾನವನ್ನು ಸಹಿಸಲಾರೆ ಎಂದು ಹೇಳಿಕೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ