ಕೇಂದ್ರ ರೈಲ್ವೆ ಹಾಗೂ ಸಂವಹನ ಇಲಾಖೆ ಸಹಾಯಕ ಸಚಿವ ಮನೋಜ್ ಸಿನ್ಹಾ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು ಸಣ್ಣಪುಟ್ಟ ಗಾಯಗಳೊಂದಿಗೆ ಸಿನ್ಹಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಉತ್ತರ ಪ್ರದೇಶದ ಗೋರಖ್ಪುರ ಬಳಿ ಶುಕ್ರವಾರ ಈ ಘಟನೆ ನಡೆದಿದೆ.
ಶುಕ್ರವಾರ ಸಂಜೆ 7.15ರ ಸುಮಾರಿಗೆ ಅಪಘಾತ ಸಂಭವಿಸಿದ್ದು ಸಚಿವರು ಬಾರಾಬಂಕಿಯಿಂದ ಗೋರಖ್ಪುರಕ್ಕೆ ತೆರಳುತ್ತಿದ್ದರು.
ತಪತಿ ನದಿ ಸೇತುವೆ ಬಳಿ ಸಚಿವರ ಕಾರು ಸಾಗುತ್ತಿದ್ದಾಗ ಮುಂದಿದ್ದ ವಾಹನ ಚಾಲಕ ಏಕಾಏಕಿ ಬ್ರೇಕ್ ಒತ್ತಿದ್ದಾನೆ. ಹೀಗಾಗಿ ಸಚಿವರ ಕಾರ್ ಮುಂದಿದ್ದ ವಾಹನಕ್ಕೆ ಗುದ್ದಿದೆ.
ಸಚಿವರ ಎಡಗಾಲಿಗೆ ಪೆಟ್ಟು ಬಿದ್ದಿದೆ. ತಕ್ಷಣ ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ರೈಲ್ವೆ ಆಸ್ಪತ್ರೆಗೆ ರವಾನಸಲಾಗಿದೆ ಎಂದು ಈಶಾನ್ಯ ರೈಲು ಅಧಿಕಾರಿ ಸಂಜಯ್ ಯಾದವ್ ತಿಳಿಸಿದ್ದಾರೆ. ಇಂದು ಅವರು ನವದೆಹಲಿಗೆ ಪ್ರಯಾಣ ಬೆಳಸಲಿದ್ದಾರೆ ಎಂದು ತಿಳಿದು ಬಂದಿದೆ.
ಸಿನ್ಹಾ ಘಾಜಿಪುರದ ಸಂಸದರಾಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ