ಬರ ಹಾಗೂ ನೆರೆ ಹಾವಳಿ ಪರಿಹಾರದ ಹಣ ನೀಡಲು ರಾಜ್ಯ ಸರಕಾರದ ಬಳಿ ಹಣವಿಲ್ಲ. ಸರಕಾರದ ಜೇಬಿನಲ್ಲಿ ಹಣ ಖಾಲಿಯಾಗಿದೆ. ಕೇಂದ್ರ ಸರಕಾರ ಹಣ ನೀಡಿದರೆ ಮಾತ್ರ ಪರಿಹಾರ ನೀಡಲು ಸಾಧ್ಯ ಎಂದು ಸಚಿವ ಎಚ್.ಕೆ.ಪಾಟೀಲ್ ಹೇಳಿದರು.
ಯಾದಗಿರಿಯ ಜಿಲ್ಲಾ ಸಭಾಂಗಣದಲ್ಲಿ ಬರ ಹಾಗೂ ನೆರೆ ಹಾವಳಿ ಹಾನಿ ಬಗ್ಗೆ ಸಭೆ ನಡೆಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ರಾಜ್ಯ ಸರಕಾರದ ಸಂಕಷ್ಟಕ್ಕೆ ಸ್ಪಂದಿಸಿ ಹಣ ಪರಿಹಾರದ ಹಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆಲಸ ಮಾಡಿದ ಕೂಲಿ ಕಾರ್ಮಿಕರಿಗೆ ಎರೆಡು ವಾರದೊಳಗೆ ಕೂಲಿ ನೀಡದಿದ್ದರೆ ಅಂತಹ ಪಿಡಿಒ ಹಾಗೂ ತಾಲೂಕು ಪಂಚಾಯತ ಇಒಗಳಿಗೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕೂಲಿ ಕಾರ್ಮಿಕರಿಗೆ ವೇತನ ನೀಡಲು ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು. ಎರೆಡು ವಾರದ ಬಳಿಕ ನೀಡದಿದ್ದರೆ ಕೂಲಿ ಕಾರ್ಮಿಕರಿಗೆ ಕೂಲಿಯ ಜೊತೆಗೆ 0.05 ಪರಿಹಾರ ಧನ ನೀಡಲಾಗುವುದು ಎಂದು
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ