ಚತ್ತಾರ್ ಪರ : ನೌಗಾಂವ್‌ನ ಗಧಮಾವು ಗ್ರಾಮದಲ್ಲಿ ಆಯೋಜಿಸಲಾಗಿದ್ದ ಸಾಮೂಹಿಕ ಭೋಜನ ಕೂಟದಲ್ಲಿ ಆಹಾರ ಸೇವಿಸಲು ನಿರಾಕರಿಸಿರುವ ಕೇಂದ್ರ ಸಚಿವೆ ಉಮಾ ಭಾರತಿ ಅವರು ದಲಿತರನ್ನು ಪವಿತ್ರಗೊಳಿಸಲು ತಾನು ಶ್ರೀರಾಮನಲ್ಲ ಎಂದು ಹೇಳಿದ್ದಾರೆ.
'ನಾನು ನನ್ನನ್ನು ರಾಮ ಎಂದು ಪರಿಗಣಿಸುವುದಿಲ್ಲ. ಆದುದರಿಂದ ದಲಿತರ ಮನೆಯಲ್ಲಿ ಆಹಾರ ಸೇವಿಸಿ ಅವರನ್ನು ಪವಿತ್ರಗೊಳಿಸಲು ಸಾಧ್ಯವಿಲ್ಲ. ಅದರ ಬದಲು ದಲಿತರನ್ನು ನನ್ನ ನಿವಾಸಕ್ಕೆ ಆಹ್ವಾನಿಸುತ್ತೇನೆ ಹಾಗೂ ಅವರಿಗೆ ವೈಯುಕ್ತಿಕವಾಗಿ ಊಟ ಹಾಕುತ್ತೇನೆ. ದಲಿತರು ನಮ್ಮ ಮನೆಗೆ ಆಗಮಿಸಿ ಹಾಗೂ ನಮ್ಮೊಂದಿಗೆ ಆಹಾರ ಸೇವಿಸಿದರೆ, ಆಗ ನಾವು ಪವಿತ್ರರಾಗುತ್ತೇವೆ. ನನ್ನ ಮನೆಯಲ್ಲಿ ನನ್ನ ಕೈಯಿಂದಲೇ ದಲಿತರಿಗೆ ಬಡಿಸಿದರೆ ನನ್ನ ಮನೆ ಪಾವನವಾಗುತ್ತದೆ’ಎಂದು ಅವರು ಹೇಳಿದ್ದಾರೆ. ದಲಿತರೊಂದಿಗಿನ ಪಕ್ಷ ಉತ್ತಮ ಸಂಬಂಧ ಹೊಂದಿದೆ ಎಂಬುದಕ್ಕೆ ರಾಮನಾಥ್ ಕೋವಿಂದ್ ಅವರನ್ನು ರಾಷ್ಟ್ರಪತಿಯಾಗಿ ನೇಮಕ ಮಾಡಿರುವುದೇ ಉತ್ತಮ ಉದಾಹರಣೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ ಒಂದು ಗಂಟೆಯ ನಂತರ ಉಮಾ ಭಾರತಿ ಅವರ ಈ ಹೇಳಿಕೆ ಬಿಜೆಪಿಗೆ ತೀವ್ರ ಮುಜುಗರ ಉಂಟುಮಾಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ