Publish Date: Tue, 21 Jun 2022 (15:18 IST)
Updated Date: Tue, 21 Jun 2022 (15:21 IST)
ಪಕ್ಷದ ಹಲವಾರು ಶಾಸಕರೊಂದಿಗೆ ಗುಜರಾತ್ ನಲ್ಲಿ ತಂಗಿರುವ ಮಹಾರಾಷ್ಟ್ರ ಸಚಿವ ಏಕಾಂತ್ ಶಿಂಧೆ ಅವರನ್ನು ಶಿವಸೇನೆ ಪಕ್ಷದಿಂದ ಉಚ್ಛಾಟಿಸಿದೆ.
ಮಹಾರಾಷ್ಟ್ರದ ನಗರಾಭಿವೃದ್ಧಿ ಸಚಿವರಾಗಿದ್ದ ಏಕಾಂತ್ ಶಿಂಧೆ ತಮ್ಮೊಂದಿಗೆ ೧೦ ಶಾಸಕರನ್ನು ಕರೆದುಕೊಂಡು ಗುಜರಾತ್ ನಲ್ಲಿ ಬೀಡು ಬಿಟ್ಟಿದ್ದು, ಪಕ್ಷದ ಸಂಪರ್ಕ ಕಳೆದುಕೊಂಡಿದ್ದಾರೆ.
ಇತ್ತೀಚೆಗೆ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನದ ಮಾಡಿದ್ದ ಈ ಶಾಸಕರು ಬಿಜೆಪಿ ಹೆಚ್ಚುವರಿ ಸ್ಥಾನ ಗೆಲ್ಲಲು ನೆರವಾಗಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಸಂಪರ್ಕಿಸಲು ಪಕ್ಷದ ಮುಖಂಡರು ಪ್ರಯತ್ನಿಸಿದ್ದರು.