ಅಮರನಾಥ ಯಾತ್ರಿಗಳ ಮೇಲಿನ ದಾಳಿಯ ಮಾಸ್ಟರ್ ಮೈಂಡ್, ಕಾಶ್ಮೀರದಲ್ಲಿ ಸಕ್ರಿಯನಾಗಿದ್ದ ಲಷ್ಕರ್ ಇ ತಯಿಬಾ ಉಗ್ರ ಅಬು ಇಸ್ಮಾಯಿಲ್`ನನ್ನ ಭದ್ರತಾ ಪಡೆ ಯೋಧರು ಗುರುವಾರ ಹೊಡೆದುರುಳಿಸಿದ್ದಾರೆ.
ಶ್ರೀನಗರದ ಹೊರವಲಯದ ನೌಗಮ್`ನ ಅರಿಬಾಗ್ ಪ್ರದೇಶದಲ್ಲಿ ನಡೆದ ಎನ್`ಕೌಂಟರ್`ನಲ್ಲಿ ಉಗ್ರ ಅಬು ಇಸ್ಮಾಯಿಲ್ ಹತ್ಯೆ ಮಾಡಲಾಗಿದ್ದು, ಪೊಲೀಸ್ ಮತ್ತು ಭದ್ರತಾ ಪಡೆ ಯೋಧರ ಬಹುದೊಡ್ಡ .ಬೇಟೆ ಇದಾಗಿದೆ. ಈತ ಇತ್ತೀಚೆಗೆ ಅಮರನಾಥ ಯಾತ್ರಿಕರ ಮೇಲೆ ನಡೆದ ಭಯೋತ್ಪಾದಕ ದಾಳಿಯ ಪ್ರಮುಖ ರೂವಾರಿಯಾಗಿದ್ದಾನೆ. ಅಮರನಾಥ ಯಾತ್ರಿಕರ ಮೇಲೆ ನಡೆದ ದಾಳಿಯಲ್ಲಿ 6 ಮಹಿಳಾ ಯಾತ್ರಿಕರು ಸೇರಿ 7 ಮಂದಿ ಹತರಾಗಿದ್ದರು. 19 ಮಂದಿ ಗಾಯಗೊಂಡಿದ್ದರು.
ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಪ್ರದೇಶವನ್ನ ಸುತ್ತುವರೆದ ಪೊಲೀಸ್ ಮತ್ತು ಭದ್ರತಾ ಪಡೆ ಯೋಧರು ಇಂಟರ್ನೆಟ್ ಸೌಲಭ್ಯ ಬಂದ್ ಮಾಡಿ ಕಾರ್ಯಾಚರಣೆ ನಡೆಸಿದ್ದಾರೆ. ಅಬು ಇಸ್ಮಾಯಿಲ್ ಜೊತೆ ಹತನಾದ ಮತ್ತೊಬ್ಬ ಉಗ್ರನನ್ನ ಪಾಕಿಸ್ತಾನ ನಿವಾಸಿ ಚೋಟಾ ಖಸೀಮ್ ಎಂದು ಗುರ್ತಿಸಲಾಗಿದೆ. ಅಬು ಇಸ್ಮಾಯಿಲ್ ಬೇಟೆಗೆ ಜುಲೈ 12ರಿಂದಲೆ ಯೋಧರು ಕಾರ್ಯಾಚರಣೆಗೆ ಇಳಿದಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
.