Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ತಿರುಪತಿ ತಿರುಮಲ ದೇವಸ್ಥಾನದ 36 ಕಂಪ್ಯೂಟರ್`ಗಳಿಗೆ ವೈರಸ್ ದಾಳಿ

ತಿರುಪತಿ ತಿರುಮಲ ದೇವಸ್ಥಾನದ 36 ಕಂಪ್ಯೂಟರ್`ಗಳಿಗೆ ವೈರಸ್ ದಾಳಿ
ತಿರುಪತಿ ತಿರುಮಲ , ಶುಕ್ರವಾರ, 19 ಮೇ 2017 (12:55 IST)
ಜಗತ್ತನ್ನೇ ಕಾಯುವ ದೈವ ತಿರುಪತಿ ತಿಮ್ಮಪ್ಪನಿಗೂ ವೈರಸ್ ಕಾಟ ತಪ್ಪಿಲ್ಲ. ತಿರುಪತಿ ತಿರುಮಲ ದೇಗುಲದ ಟಿಟಿಡಿ ದೇವಸ್ಥಾನಂಗೆ ಸಂಬಂಧಿಸಿದ ಕಂಪ್ಯೂಟರ್`ಗಳಿಗೆ ವನ್ನ ಕ್ರೈ ರಾನ್ಸಮ್ ವೇರ್ ವೈರಸ್ ದಾಳಿ ಇಟ್ಟಿದೆ ಎಂದು ಟಿಟಿಡಿ ಅಧಿಕಾರಿಗಳು ಅಧಿಕೃತವಾಗಿ ಪ್ರಕಟಿಸಿದ್ದಾರೆ.

ಟಿಟಿಡಿ ಕೇಂದ್ರ ಕಚೇರಿಯಲ್ಲಿ ಬಳಸಲಾಗುವ 2500 ಕಂಪ್ಯೂಟರ್`ಗಳ ಪೈಕಿ ಸ್ಥಳೀಯ ಆಡಳಿತಕ್ಕೆ ಬಳಸುವ 36 ಕಂಪ್ಯೂಟರ್`ಗಳು ವೈರಸ್ ದಾಳಿಗೆ ತುತ್ತಾಗಿವೆ ಎಂದು ಪಿಆರ್`ಓ ತಲರಿ ರವಿ ಪಿಟಿಐಗೆ ತಿಳಿಸಿದ್ದಾರೆ.

ವೈರಸ್ ದಾಳಿಗೆ ತುತ್ತಾದ ಎಲ್ಲ ಕಂಪ್ಯೂಟರ್`ಗಳು ಹಳೇ ವರ್ಶನ್`ಗೆ ಸೇರಿದ್ದವಾಗಿದ್ದು, ಇದೀಗ, ಅಪ್ಡೇಟ್ ಮಾಡಲಾಗಿದೆ. ವೈರಸ್ ದಾಳಿಯನ್ನ ಸಂಪುರ್ಣ ತಡೆಗಟ್ಟಲಾಗಿದೆ ಎಂದು ತಿಳಿಸಿದ್ದಾರೆ. ಆನ್`ಲೈನ್ ಸರ್ವಿಸ್`ಗಾಗಿಯೇ ನೂರಾರು ಕಂಪ್ಯೂಟರ್`ಗಳನ್ನ ಆಡಳಿತ ಮಂಡಳಿಯಲ್ಲಿ ಅಳವಿಡಸಲಾಗಿದ್ದು, ಇದಕ್ಕೆ ಯಾವುದೇ ತೊಂದರೆಯಾಗಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಂಚಿಸಿದ ಪ್ರಿಯಕರನ ವಿವಾಹದ ಪೆಂಡಾಲ್‌ಗೆ ಬೆಂಕಿ ಹಚ್ಚಿದ ಮಹಿಳೆ