ನವದೆಹಲಿ: 2012 ರ ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳನ್ನು ಗಲ್ಲಿಗೇರಿಸುವ ಸಿದ್ಧತೆ ಆರಂಭವಾಗಿದೆ. ಆದರೆ ಗಲ್ಲಿಗೇರಿಸಲು ಹ್ಯಾಂಗ್ ಮ್ಯಾನ್ ಗಳಿಲ್ಲದೇ ತಿಹಾರ್ ಜೈಲು ಅಧಿಕಾರಿಗಳು ಪರದಾಡುತ್ತಿದ್ದಾರೆ.
ಕೇಂದ್ರ ಗೃಹ ಸಚಿವಾಲಯ ಈ ಅಪರಾಧಿಗಳಿಗೆ ಕ್ಷಮಾದಾನ ನೀಡದಂತೆ ರಾಷ್ಟ್ರಪತಿಗಳಿಗೆ ಶಿಫಾರಸ್ಸು ಮಾಡಿದೆ. ಈ ಹಿನ್ನಲೆಯಲ್ಲಿ ಅಪರಾಧಿಗಳಿಗೆ ತಿಂಗಳೊಳಗಾಗಿ ಗಲ್ಲು ಶಿಕ್ಷೆ ಜಾರಿಯಾಗುವ ಸಾಧ‍್ಯತೆಯಿದೆ. ಆದರೆ ಶಿಕ್ಷೆ ಜಾರಿಗೊಳಿಸಲು ಸದ್ಯಕ್ಕೆ ತಿಹಾರ್ ಜೈಲ್ ನಲ್ಲಿ ಹ್ಯಾಂಗ್ ಮ್ಯಾನ್ ಗಳಿಲ್ಲ.
ಹೀಗಾಗಿ ದೇಶದ ಬೇರೆ ಜೈಲುಗಳಲ್ಲಿ ಹ್ಯಾಂಗ್ ಮ್ಯಾನ್ ಗಳಿದ್ದಾರೆಯೇ ಎಂದು ಇಲ್ಲಿನ ಜೈಲಾಧಿಕಾರಿಗಳು ತಲಾಷ್ ಮಾಡುತ್ತಿದ್ದಾರೆ. 2013 ರಲ್ಲಿ ಉಗ್ರ ಅಫ್ಜಲ್ ಗುರುವಿಗೆ ಇದೇ ಜೈಲಿನಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ಅದಾದ ಬಳಿಕ ಇಲ್ಲಿ ಯಾವ ಖೈದಿಗೂ ಗಲ್ಲು ಶಿಕ್ಷೆ ಜಾರಿಗೊಳಿಸಿರಲಿಲ್ಲ. ಇದೀಗ ಹ್ಯಾಂಗ್ ಮ್ಯಾನ್ ಗಳು ಸಿಕ್ಕರೆ ತಕ್ಷಣವೇ ನಿರ್ಭಯಾ ಅಪರಾಧಿಗಳ ಶಿಕ್ಷೆ ಜಾರಿ ಮಾಡಲು ಜೈಲಾಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ.