ಹೈದರಾಬಾದ್: ನಾಲ್ವರು ಕೀಚಕರಿಂದ ತಮ್ಮ ಮಗಳ ಮೇಲೆ ಅತ್ಯಾಚಾರವಾಗಿ ಆಕೆಯನ್ನು ಮೃಗೀಯವಾಗಿ ಕೊಂದಾಗ ಬಾರದ ಮಾನವ ಹಕ್ಕು ಸಂಘಟನೆಯವರು ಈಗ ಆ ಆರೋಪಿಗಳು ಸತ್ತಾಗ ಯಾಕೆ ಬಂದು ತನಿಖೆ ಮಾಡುತ್ತಿದ್ದಾರೆ ಎಂದು ಪಶುವೈದ್ಯೆ ದಿಶಾ ಅತ್ಯಾಚಾರ ಸಂತ್ರಸ್ತೆಯ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೈದರಾಬಾದ್ ಎನ್ ಕೌಂಟರ್ ಸ್ಥಳಕ್ಕೆ ಆಗಮಿಸಿದ ಮಾನವ ಹಕ್ಕು ನಿಯೋಗದ ಅಧಿಕಾರಿಗಳು ಎನ್ ಕೌಂಟರ್ ನ ನೈಜತೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇದರ ಬಗ್ಗೆ ದಿಶಾ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನನ್ನ ಮಗಳ ಮೆಲೆ ಅನ್ಯಾಯವಾದಾಗ ಇವರೆಲ್ಲಾ ಎಲ್ಲಿ ಹೋಗಿದ್ದರು. ಅಪರಾಧಿಗಳನ್ನು ಕೊಲ್ಲುವುದು ಮಾನವ ಹಕ್ಕುಗಳ ಉಲ್ಲಂಘನೆಯಾದರೆ ಅತ್ಯಾಚಾರ ಮಾಡಿ ಕೊಲೆ ಮಾಡುವುದು ಅಪರಾಧವಲ್ಲವಾ ಎಂದು ದಿಶಾ ಪೋಷಕರು ಪ್ರಶ್ನಿಸಿದ್ದಾರೆ.