ನವದೆಹಲಿ : ಗೋವುಗಳನ್ನು ಆರಾಧಿಸುವವರು ಮೂರ್ಖರು ಎಂದು ಭಾರತೀಯ ಪತ್ರಿಕಾ ಮಂಡಳಿಯ ಮಾಜಿ ಅಧ್ಯಕ್ಷ ಹಾಗೂ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಮಾರ್ಕಾಂಡೇಯ ಖಟ್ಜು ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಅವರು,’ ಗೋವುಗಳು ಕುದುರೆ, ನಾಯಿಗಳಂತೆ ಪ್ರಾಣಿಗಳು. ಆದುದರಿಂದ ಗೋವುಗಳನ್ನು ಆರಾಧಿಸುವವರು ಮೂರ್ಖರು’ ಎಂದು ಹೇಳಿದ್ದಾರೆ. ‘ಜೂನ್‌ನಿಂದ ಡಿಸೆಂಬರ್ ವರೆಗೆ ನಾನು ಅಮೇರಿಕದಲ್ಲಿ ಇದ್ದೆ. ಗೋಮಾಂಸ ತಿನ್ನುವುದಕ್ಕೆ ಹತ್ಯೆ ನಡೆಸುತ್ತಿರುವುದಕ್ಕೆ ಅಲ್ಲಿ ಅಪಹಾಸ್ಯ ಮಾಡುತ್ತಿದ್ದಾರೆ. ಈ ಸರಕಾರ ಜಗತ್ತಿನಾದ್ಯಂತ ನಮಗೆ ಅವಮಾನ ಮಾಡುತ್ತಿದೆ’ ಎಂದು ಹೇಳಿದ್ದಾರೆ.
ಶುಕ್ರವಾರದಂದು ಮುಸ್ಲಿಂಮರು ಪಾರ್ಕ್ ಗಳಲ್ಲಿ ಪ್ರಾರ್ಥನೆ ಮಾಡುವುದನ್ನು ನಿಲ್ಲಿಸಿರುವ ವಿಚಾರದ ಬಗ್ಗೆ ಮಾತನಾಡಿದ ಅವರು,’ಶಸ್ತ್ರಾಸ್ತ್ರಗಳಿಲ್ಲದೆ ಯಾವುದೇ ಸಮುದಾಯ ಶಾಂತಿಯುತವಾಗಿ ಸೇರುವ ಹಕ್ಕನ್ನು ಸಂವಿಧಾನದ ಕಲಂ 19 ನೀಡಿದೆ. ಆದುದರಿಂದ ಶುಕ್ರವಾರದ ಪ್ರಾರ್ಥನೆಯನ್ನು ಆದಿತ್ಯನಾಥ್ ಸರಕಾರ ನಿಲ್ಲಿಸಿರುವುದು ಅಸಂವಿಧಾನಿಕ. ಆರ್‌ಎಸ್‌ಎಸ್ ಪಾರ್ಕ್‌ಗಳಲ್ಲಿ ಶಾಖೆ ಮಾಡುತ್ತದೆ. ಆದರೆ, ಮುಸ್ಲಿಮರು ಪ್ರಾರ್ಥನೆ ಮಾಡುವುದಕ್ಕೆ ಮಾತ್ರ ಯಾಕೆ ನಿರಾಕರಿಸಬೇಕು’ ಎಂದು ಅವರು ಕಿಡಿಕಾರಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.