ಲಕ್ನೋ: ಉತ್ತರಪ್ರದೇಶದ ಚೌಢಿಪುರ ಎಂಬ ಗ್ರಾಮದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆಯೇ ಇರಲ್ಲ. ಅದಕ್ಕಿರುವ ಕಾರಣ ಇಂಟ್ರೆಸ್ಟಿಂಗ್ ಆಗಿದೆ.
ಸ್ವಾತಂತ್ರ್ಯ ಬಂದು 70 ವರ್ಷ ಕಳೆದಿದೆ. ಹಾಗಿದ್ದರೂ ತಮ್ಮ ಗ್ರಾಮ ಅಭಿವೃದ್ಧಿ ಕಂಡಿಲ್ಲ. ಕುಗ್ರಾಮವಾಗಿಯೇ ಇದೆ ಎಂಬುದು ಗ್ರಾಮಸ್ಥರ ಕೋಪಕ್ಕೆ ಕಾರಣ.
ಈ ಗ್ರಾಮಕ್ಕೆ ಇನ್ನೂ ವಿದ್ಯುತ್, ಸೂಕ್ತ ರಸ್ತೆ, ಶೌಚಾಲಯ ವ್ಯವಸ್ಥೆ ಯಾವುದೂ ಸಿಕ್ಕಿಲ್ಲ. ಇಲ್ಲಿರುವ ಹೆಚ್ಚಿನ ಮಂದಿ ಬಡತನದಿಂದ ಬಳಲುತ್ತಿದ್ದಾರೆ. ಅಧಿಕಾರಿಗಳಿಗೆ ಈ ಬಗ್ಗೆ ಎಷ್ಟೇ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇದರಿಂದ ಬೇಸತ್ತ ಗ್ರಾಮಸ್ಥರು ಸ್ವಾತಂತ್ರ್ಯೋತ್ಸವವನ್ನೇ ಬಹಿಷ್ಕರಿಸಲು ತೀರ್ಮಾನಿಸಿದ್ದಾರೆ.