Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಈ ಬಾರಿ 64.2 ಕೋಟಿ ಮತದಾನದ ಮೂಲಕ ವಿಶ್ವ ದಾಖಲೆ: ಚುನಾವಣಾ ಆಯೋಗ

Rajeev Kumar

sampriya

ನವದೆಹಲಿ , ಸೋಮವಾರ, 3 ಜೂನ್ 2024 (16:44 IST)
Photo By X
ನವದೆಹಲಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 64.2 ಕೋಟಿ ಜನರು ಮತದಾನ ಮಾಡುವ ಮೂಲಕ  ಭಾರತದ ಚುನಾವಣಾ ಇತಿಹಾಸದಲ್ಲಿ ವಿಶ್ವ ದಾಖಲೆ ಮಾಡಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ಹೇಳಿದರು.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ 31.2 ಕೋಟಿ ಮಹಿಳೆಯರು ಸೇರಿದಂತೆ ಈ ಬಾರಿ 64. 2 ಕೋಟಿ ಮಂದಿ ಮತದಾನ ಮಾಡಿದ್ದಾರೆ. 

ವಿಶ್ವದ ಅತಿದೊಡ್ಡ ಚುನಾವಣಾ ಕಾರ್ಯದಲ್ಲಿ 68,000 ಮೇಲ್ವಿಚಾರಣಾ ತಂಡಗಳು ಮತ್ತು 1.5 ಕೋಟಿ ಚುನಾವಣಾ ಮತ್ತು ಭದ್ರತಾ ಸಿಬ್ಬಂದಿ ಭಾಗಿಯಾಗಿದ್ದರು.

2024 ರ ಲೋಕಸಭೆ ಚುನಾವಣೆಯಲ್ಲಿ ನಗದು, ಉಚಿತ ಕೊಡುಗೆಗಳು, ಡ್ರಗ್ಸ್ ಮತ್ತು ಮದ್ಯ ಸೇರಿದಂತೆ ರೂ. 10,000 ಕೋಟಿ ಮೌಲ್ಯದಷ್ಟು ವಶಕ್ಕೆ ಪಡೆಯಲಾಗಿದೆ ಎಂದು ಅವರು ಮಾಹಿತಿ ನೀಡಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಐಎಎಸ್‌ ದಂಪತಿಗಳ ಪುತ್ರಿ ಬಹುಮಹಡಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ