ನವದೆಹಲಿ : ಹೊಸ ವರ್ಷ 2023 ಸಂಭ್ರಮಾಚರಣೆಗೆ ಕ್ಷಣಗಣನೆ ಶುರುವಾಗಿದೆ. ಹಳೆ ವರ್ಷದ ಸುಖ-ದುಃಖ, ನೋವು ನಲಿವನ್ನು ನೆನೆದು ಎಲ್ಲದಕ್ಕೂ ಗುಡ್ಬೈ ಹೇಳಿ, ಸಿಹಿ ಕನಸುಗಳನ್ನು ಹೊತ್ತು ನ್ಯೂ ಇಯರ್ ಸೆಲಬ್ರೇಟ್ ಮಾಡಲು ಎಲ್ಲರೂ ಕಾತರರಾಗಿದ್ದಾರೆ.
ಸ್ನೇಹಿತರು, ಕುಟುಂಬದವರು, ಪ್ರೀತಿ ಪಾತ್ರರೊಡನೆ ಮೋಜು-ಮಸ್ತಿ ಮಾಡುತ್ತಾ ಹೊಸ ವರ್ಷ ಸ್ವಾಗತಿಸುವುದು ವಾಡಿಕೆ. ಆದರೆ ಎಲ್ಲಾ ದೇಶಗಳಲ್ಲೂ ಒಂದೇ ಸಮಯದಲ್ಲಿ ಹೊಸ ವರ್ಷ ಆಚರಣೆ ಮಾಡುವುದಿಲ್ಲ.
ದೇಶದಿಂದ ದೇಶಕ್ಕೆ ಕಾಲಮಾನದಲ್ಲಿ ವ್ಯತ್ಯಾಸವಿರುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಹೀಗಾಗಿ ಕೆಲವು ದೇಶಗಳಲ್ಲಿ ನ್ಯೂ ಇಯರ್ ಸಂಭ್ರಮಾಚರಣೆ ಸಮಯ ಮೊದಲೇ ಬರುತ್ತೆ. ಕೆಲವು ದೇಶಗಳಿಗೆ ಕೊನೆಯಲ್ಲಿ ಬರುತ್ತೆ.
ಅಷ್ಟೇ ಅಲ್ಲದೇ, ಇನ್ನೂ ಕೆಲವು ದೇಶಗಳು ವರ್ಷದ ಕೊನೆಯಲ್ಲಿ ಸಂಭ್ರಮಾಚರಣೆ ಮಾಡುವುದಿಲ್ಲ. ಬದಲಾಗಿ ತಮ್ಮ ದೇಶದ ಸಂಪ್ರದಾಯ, ಹಬ್ಬಗಳಿಗೆ ಅನುಸಾರವಾಗಿ ಹೊಸ ವರ್ಷವನ್ನು ಸ್ವಾಗತಿಸುತ್ತವೆ. ಉದಾಹರಣೆಗೆ ಭಾರತಕ್ಕೆ ಹೊಸ ವರ್ಷವೆಂದರೆ ಅದು ಯುಗಾದಿ ಸಂದರ್ಭ.