ಪಾಟ್ನಾ : ನಮ್ಮ ಇಲಾಖೆಯಲ್ಲಿರುವ ಅಧಿಕಾರಿಗಳು, ನೌಕರರು ಕಳ್ಳರು. ಈ ಕಳ್ಳರಿಗೆ ನಾನೇ ಸರ್ದಾರ (ಮುಖ್ಯಸ್ಥ) ಎಂದು ಬಿಹಾರದ ಕೃಷಿ ಸಚಿವ ಸುಧಾಕರ್ ಸಿಂಗ್ ಹೇಳಿಕೊಂಡಿದ್ದಾರೆ.
ಕೈಮೂರ್ ಜಿಲ್ಲೆಯಲ್ಲಿ ರೈತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನನ್ನ ಇಲಾಖೆಯಲ್ಲಿ ಅನೇಕ ಕಳ್ಳರಿದ್ದು, ಹಣವನ್ನು ದೋಚುತ್ತಿದ್ದಾರೆ. ನಾನು ಇಲಾಖೆಗೆ ಪ್ರಭಾರಿಯಾಗಿರುವುದರಿಂದ ಅವರಿಗೆ ಮುಖ್ಯಸ್ಥನಾಗುತ್ತೇನೆ.
ನನಗಿಂತ ಮೇಲಿರುವ ಅನೇಕ ಮುಖ್ಯಸ್ಥರಿದ್ದಾರೆ. ಈ ಸರ್ಕಾರವು ಹಳೆಯದು. ಅದರ ಕಾರ್ಯಶೈಲಿಯೂ ಹಳೆಯದು. ಸರ್ಕಾರವನ್ನು ಎಚ್ಚರಿಸುವುದು ಸಾಮಾನ್ಯ ಜನರ ಕರ್ತವ್ಯ ಎಂದು ತಿಳಿಸಿದ್ದಾರೆ.
ನೀವು ಪ್ರತಿಕೃತಿಗಳನ್ನು ಸುಟ್ಟರೆ, ಏನೋ ತಪ್ಪಾಗಿದೆ ಎಂದು ನನಗೆ ಅರಿವಾಗುತ್ತದೆ. ಆದರೆ ನೀವು ಅದನ್ನು ಮಾಡದಿದ್ದರೆ, ಎಲ್ಲವೂ ಸರಿಯಾಗಿದೆ ಎಂದು ನಾನು ನಂಬುತ್ತೇನೆ ಎಂದು ರೈತರನ್ನು ಎಚ್ಚರಿಸಿದ್ದಾರೆ.