ಚೆನ್ನೈ : 22 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿಸಿದ ದುಷ್ಕರ್ಮಿಗಳು ಆಕೆ ಹಾಗೂ ಆಕೆಯ ಮೂರುವರೆ ವರ್ಷದ ಮಗುವನ್ನು ಕೊಲೆ ಮಾಡಿದ ಅಮಾನವೀಯ ಘಟನೆ ಚೆನ್ನೈನ ಅವಡಿ ಭಾಗದಲ್ಲಿ ಬುಧವಾರ ನಡೆದಿದೆ.
ಪತಿ ಪಾಂಡಿಚೇರಿಗೆ ವ್ಯಾಪಾರಕ್ಕೆಂದು ತೆರಳಿದ್ದ ಹಿನ್ನಲೆಯಲ್ಲಿ ಮಹಿಳೆ ತನ್ನ ತಂದೆ ಮನೆಗೆ ಬಂದಿದ್ದಳು. ಆದರೆ ಪತಿ ಕರೆ ಮಾಡಿ ಕೆಲ ವಸ್ತುಗಳನ್ನು ಪಾಂಡಿಚೇರಿಗೆ ಕಳುಹಿಸುವಂತೆ ಹೇಳಿದ್ದರಿಂದ ಆಕೆ ಮನೆಗೆ ಬಂದು ಆ ವಸ್ತುಗಳನ್ನು ಕಳುಹಿಸಿ ರಾತ್ರಿ ಅಲ್ಲೇ ಮಲಗಿದ್ದಾಳೆ. ಆ ವೇಳೆ ಮನೆಗೆ ನುಗ್ಗಿದ ದುಷ್ಕರ್ಮಿಗಳು ಆಕೆಯ ಮೇಲೆ ಅತ್ಯಾಚಾರ ಎಸಗಿ ಬಳಿಕ ಆಕೆಯ ತಲೆಗೆ ಜಜ್ಜಿ ಕೊಲೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಅಲ್ಲೇ ಇದ್ದ ಆಕೆಯ ಮೂರುವರೆ ವರ್ಷದ ಮಗುವನ್ನು ಕೂಡ ಕೊಲೆ ಮಾಡಿದ್ದಾರೆ.
ಮರುದಿನ ಪಕ್ಕದ ಮನೆ ಹುಡುಗಿ ಮಗುವಿನ ಜೊತೆ ಆಟವಾಡಲು ಅಲ್ಲಿಗೆ ಬಂದಾಗ ಕೊಲೆ ನಡೆದಿರುವುದು ತಿಳಿದುಬಂದಿದೆ. ತಕ್ಷಣ ಆಕೆ ಈ ವಿಚಾರ ತನ್ನ ತಂದೆ ತಿಳಿಸಿ ಆನಂತರ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿಚಾರಣೆ ನಡೆಸುತ್ತಿದ್ದ ವೇಳೆ ವೀರ್ ಕುಮಾರ್ ಎಂಬಾತ ಅನುಮಾನಾಸ್ಪದವಾಗಿ ಓಡಾಡುತ್ತಿರುವುದು ತಿಳಿದು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.