ಚೆನ್ನೈ : ಕೆಲಸದ ಸಮಯವನ್ನು ದಿನಕ್ಕೆ 12 ಗಂಟೆಗೆ ವಿಸ್ತರಿಸಿದ್ದ ಕಾರ್ಖಾನೆಗಳ ತಿದ್ದುಪಡಿ ಕಾಯ್ದೆ 2023 ಅನ್ನು ಕಾರ್ಮಿಕರ ಹಿತದೃಷ್ಟಿಯಿಂದ ಹಿಂತೆಗೆದುಕೊಳ್ಳಲಾಗಿದೆ ಎಂದು ತಮಿಳುನಾಡಿನ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಸೋಮವಾರ ಹೇಳಿದ್ದಾರೆ.
ಮೇ ಡೇ ಪಾರ್ಕ್ನಲ್ಲಿ ಮೇ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಸ್ಟಾಲಿನ್, ಕಾರ್ಖಾನೆಗಳ ತಿದ್ದುಪಡಿ ಕಾಯಿದೆ 2023, ಕೈಗಾರಿಕೆಗಳಿಗೆ ದಿನಕ್ಕೆ 12 ಗಂಟೆ ಎಂದರೆ ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಗಳವರೆಗೆ ಇದ್ದ ಕೆಲಸದ ಸಮಯವನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
ಕಾರ್ಮಿಕರ ಕಲ್ಯಾಣ ದೃಷ್ಟಿಯಿಂದ ನಾವು ಯಾವುದೇ ಪರಿಸ್ಥಿತಿಯಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಕೈಗಾರಿಕೆಗಳು ಬೆಳೆಯಬೇಕು ಮತ್ತು ಕಾರ್ಮಿಕರ ಏಳಿಗೆಯಾಗಬೇಕು. ನಾನು ಎಂದಿಗೂ ಮಣಿಯುವುದನ್ನು ಅವಮಾನ ಎಂದು ಪರಿಗಣಿಸಲ್ಲ. ನಾನು ಅದನ್ನು ಹೆಮ್ಮೆಯ ವಿಷಯ ಎಂದು ಪರಿಗಣಿಸಿದ್ದೇನೆ. ಏಕೆಂದರೆ ಶಾಸನವನ್ನು ಖಚಿತಪಡಿಸಿಕೊಳ್ಳಲು ಹಾಗೂ ಮಸೂದೆಯನ್ನು ಹಿಂಪಡೆಯಲು ಧೈರ್ಯ ಬೇಕಾಗುತ್ತದೆ ಎಂದರು.