Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮೇಕೆಗಳನ್ನು ಬಂಧಿಸಿದ ಪೊಲೀಸರು. ಕಾರಣವೇನು ಗೊತ್ತಾ?

ಮೇಕೆಗಳನ್ನು ಬಂಧಿಸಿದ ಪೊಲೀಸರು. ಕಾರಣವೇನು ಗೊತ್ತಾ?
ತೆಲಂಗಾಣ , ಶುಕ್ರವಾರ, 13 ಸೆಪ್ಟಂಬರ್ 2019 (13:30 IST)
ತೆಲಂಗಾಣ : ಎನ್​ ಜಿಓ ಸಂಸ್ಥೆ ಬೆಳೆಸಿದ ಗಿಡಗಳನ್ನು ತಿಂದಿದ್ದಕ್ಕೆ ತೆಲಂಗಾಣ ಪೊಲೀಸರು ಮೇಕೆಗಳನ್ನು ಬಂಧಿಸಿದ ಘಟನೆ ಕರೀಂನಗರ ಜಿಲ್ಲೆಯ ಹುಜುರಾಬಾದ್​ ನಗರದಲ್ಲಿ. ನಡೆದಿದೆ.




ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಎನ್ ​ಜಿಓ ಸಂಸ್ಥೆಯೊಂದು ನೆಟ್ಟಿದ್ದ ಸುಮಾರು 150 ಸಸಿಗಳನ್ನು ಮೇಕೆಗಳು ತಿಂದು ಹಾಕಿದ್ದಾವೆ. ಅವುಗಳನ್ನು ರೆಡ್ ಹ್ಯಾಂಡ್ ಆಗಿ ಹಿಡಿದ  'ಮರಗಳನ್ನು ಉಳಿಸಿ'ಸಂಸ್ಥೆಯ ಕಾರ್ಯಕರ್ತರು ಪೊಲೀಸರಿಗೆ ಒಪ್ಪಿಸಿದ್ದಾರೆ.


ಕಾರ್ಯಕರ್ತರು ನೀಡಿದ ದೂರಿನ ಮೇರೆಗೆ ಮೇಕೆಗಳನ್ನು ಬಂಧಿಸಿದ ಪೊಲೀಸರು ಪೊಲೀಸ್​ ಠಾಣೆಯ ಹೊರಗೆ ಕಟ್ಟಿಹಾಕಿದ್ದು, ಮೇಕೆಗಳ ಮಾಲೀಕ 1 ಸಾವಿರ ರೂ. ದಂಡ ಕಟ್ಟಿದ ಬಳಿಕ ಆ ಮೇಕೆಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಬೃಹತ್​ ಕೆಂಪೇಗೌಡರ ಪ್ರತಿಮೆ ಸ್ಥಾಪಿಸಲು 100 ಕೋಟಿ ರೂ. ಬಿಡುಗಡೆಗೆ ನಿರ್ಧರಿಸಿದ ರಾಜ್ಯ ಸರ್ಕಾರ