ಅಮೇರಿಕಾ : ಹೆಚ್ಚಾಗಿ ಎಲ್ಲಾ ರಾಷ್ಟ್ರಗಳಲ್ಲಿಯೂ ಚುನಾವಣೆಯಲ್ಲಿ ಜನಪ್ರತಿನಿಧಿಗಳು ಸ್ಪರ್ಧಿಸಿ ಗೆಲ್ಲುತ್ತಾರೆ. ಆದರೆ ಅಮೆರಿಕ ದೇಶದ ನಗರವೊಂದರಲ್ಲಿ ಪ್ರಾಣಿಗಳು ಚುನಾವಣೆಗೆ ಸ್ಪರ್ಧಿಸಿ ಗೆದ್ದ ವಿಚಿತ್ರ ಘಟನೆಯೊಂದು ನಡೆದಿದೆ.
ಹೌದು. 2500 ಜನಸಂಖ್ಯೆ ಇರುವ ಅಮೇರಿಕಾದ ಫೇರ್ ಹವೆನ್ನ ವರ್ಮಂಟ್ ಎಂಬ ಚಿಕ್ಕ ನಗರದಲ್ಲಿ ಮೇಯರ್ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದವರು ಮನುಷ್ಯರಲ್ಲ, ಬದಲಾಗಿ ಪ್ರಾಣಿಗಳು. ನಾಯಿ, ಬೆಕ್ಕು ಮತ್ತು ಮೇಕೆಗಳು. ಮೇಯರ್ ಚುನಾವಣೆಯಲ್ಲಿ ನಾಯಿ, ಬೆಕ್ಕು, ಮೇಕೆ ಸೇರಿದಂತೆ ಒಟ್ಟು 16 ಪ್ರಾಣಿಗಳು ಸ್ಪರ್ಧಿಸಿದ್ದವು.
ಈ ಚುನಾವಣೆಯಲ್ಲಿ ಲಿಂಕೊಲ್ನ್ ಹೆಸರಿನ 3 ವರ್ಷದ ನುಬಿಯನ್ ಮೇಕೆ ಬರೋಬ್ಬರಿ 13 ಮತಗಳನ್ನು ಪಡೆದು ಗೆಲುವು ಸಾಧಿಸುವ ಮೂಲಕ ಮೇಯರ್ ಸ್ಥಾನವನ್ನು ಅಲಂಕರಿಸಿದೆ. ಲಿಂಕೊಲ್ನ್ ಮಂಗಳವಾರ ಅಧಿಕೃತವಾಗಿ ಅಧಿಕಾರ ವಹಿಸಿಕೊಳ್ಳಲಿದೆ. ಮೇಯರ್ ಚುನಾವಣೆಯಲ್ಲಿ ಮೇಯರ್ ಆಗಿ ಆಯ್ಕೆಯಾಗುವ ಮೂಲಕ ಮೊದಲ ಗೌರವಾನ್ವಿತ ಪ್ರಾಣಿ ಮೇಯರ್ ಎಂಬ ಹೆಗ್ಗಳಿಕೆಗೆ ಅದು ಪಾತ್ರವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ