ಚೆನ್ನೈ : ಮಹಿಳೆಯೊಬ್ಬಳು ತನ್ನ ಮಗುವನ್ನು ಮಾರಾಟ ಮಾಡಿ ಹಿಂದಿರುಗುತ್ತಿದ್ದಾಗ ದರೋಡೆಕೋರರಿಬ್ಬರು ಮಾರಾಟದ ಹಣವನ್ನು ದೋಚಿಕೊಂಡು ಹೋದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಯಾಸ್ಮಿನ್ (28) ಹಣ ಕಳೆದುಕೊಂಡ ಮಹಿಳೆ. ಪತಿ ಬಿಟ್ಟು ಹೋಗಿದ್ದರಿಂದ ಯಾಸ್ಮಿನ್ ಆರ್ಥಿಕವಾಗಿ ಕಷ್ಟದಲ್ಲಿದ್ದಳು. ಇದರಿಂದಾಗಿ ಗರ್ಭಪಾತ ಮಾಡಿಸಿಕೊಳ್ಳಲು ಖಾಸಗಿ ಆಸ್ಪತ್ರೆಗೆ ಬಂದಿದ್ದಳು. ಆ ಸಂದರ್ಭದಲ್ಲಿ ಎನ್ನೂರಿನ ನಿವಾಸಿ ಜಯಗೀತಾ ಪರಿಚಯವಾದರು. ಜಯಗೀತಾ ತನಗೆ ಪರಿಚಯವಿರುವ ಒಬ್ಬರಿಗೆ ಮಗು ಮಾರಾಟ ಮಾಡಿದರೆ ಸಾಕಷ್ಟು ಹಣ ನೀಡುವುದಾಗಿ ತಿಳಿಸಿದ್ದಳು.