Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹೆಚ್ಚು ಪದಕ ಗೆಲ್ಲುವ ಗುರಿ ನಮ್ಮದಾಗಬೇಕು : ಅಮಿತ್ ಶಾ

ಹೆಚ್ಚು ಪದಕ ಗೆಲ್ಲುವ ಗುರಿ ನಮ್ಮದಾಗಬೇಕು : ಅಮಿತ್ ಶಾ
ನವದೆಹಲಿ , ಬುಧವಾರ, 4 ಮೇ 2022 (08:04 IST)
ಬೆಂಗಳೂರು : ಮುಂದಿನ ಒಲಿಂಪಿಕ್ಗಳಲ್ಲಿ ಹೆಚ್ಚು ಪದಕಗಳನ್ನು ಗೆಲ್ಲುವ ಗುರಿ ನಮ್ಮದಾಗಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆಶಯ ವ್ಯಕ್ತಪಡಿಸಿದ್ದಾರೆ.

ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್-2021 ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 2014ರ ಮುಂಚೆ ಕ್ರಿಕೆಟ್ಗೆ ಮಾನ್ಯತೆ ದೇಶದಲ್ಲಿ ಹೆಚ್ಚು ಇತ್ತು. ಅಂತರರಾಷ್ಟ್ರೀಯ ಕ್ರೀಡೆಯಲ್ಲಿ ನಮ್ಮ ಕ್ರೀಡಾಪಟುಗಳು ಪದಕ ತರುತ್ತಿರಲಿಲ್ಲ.

ಮೋದಿ ಅವರು 2014ರಲ್ಲಿ ಆಡಳಿತಕ್ಕೆ ಬಂದ ಮೇಲೆ ಕ್ರೀಡೆಗೆ ಮೊದಲ ಆದ್ಯತೆ ಕೊಟ್ಟರು. ಕ್ರೀಡೆಗೆ ಹೆಚ್ಚು ಪ್ರೋತ್ಸಾಹ ಕೊಟ್ಟರು. ಇವತ್ತು ನಮ್ಮ ಕ್ರೀಡಾಪಟುಗಳು ಪದಕ ತರುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. 

ನಮ್ಮ ಕ್ರೀಡಾ ಸಚಿವರು ಅತ್ಯುತ್ತಮ ಕ್ರೀಡಾಕೂಟ ವ್ಯವಸ್ಥೆ ಮಾಡಿದ್ದಾರೆ. ಉತ್ತಮ ಕೋಚ್ ವ್ಯವಸ್ಥೆ, ಎಲ್ಲಾ ಸೌಲಭ್ಯವನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಹೀಗಾಗಿ ದೇಶದಲ್ಲಿ ಇವತ್ತು ಕ್ರೀಡಾ ಕ್ಷೇತ್ರದಲ್ಲಿ ಬದಲಾವಣೆ ಆಗಿದೆ. ಕ್ರೀಡಾ ಜೀವನದ ಅಂಗ. ಕ್ರೀಡೆ ಗೊತ್ತಿರುವವನು ಎಲ್ಲವನ್ನೂ ಎದುರಿಸುತ್ತಾನೆ.

130 ಕೋಟಿ ಜನಸಂಖ್ಯೆಯಿರುವ ದೇಶದಲ್ಲಿ ಮೊದಲ ಪದಕ ತರಲು ಆಗ್ತಿರಲಿಲ್ಲ. ಇವತ್ತು ಪದಕ ಗಳು ನಮ್ಮ ದೇಶಕ್ಕೆ ಬರುತ್ತಿದೆ. ಇದು 2014 ನಂತರದ ಪರಿವರ್ತನೆ. ಅಲ್ಪ ಕಾಲದಲ್ಲಿ ಮೋದಿ ಅವರು ಈ ಸಾಧನೆ ಮಾಡಿದ್ದಾರೆ ಎಂದು ಬಣ್ಣಿಸಿದ್ದಾರೆ.

100 ವರ್ಷಗಳ ಸ್ವಾತಂತ್ರ್ಯ ಸಂಭ್ರಮದಲ್ಲಿ ಭಾರತ ಒಲಿಂಪಿಕ್ಸ್ ಪದಕ ಪಟ್ಟಿಯಲ್ಲಿ ಟಾಪ್ 5ರ ಸ್ಥಾನದಲ್ಲಿ ಇರಬೇಕು ಅನ್ನೋ ಸಂಕಲ್ಪವನ್ನು ಮೋದಿ ಮಾಡಿದ್ದಾರೆ. ಹೀಗಾಗಿ ವಿವಿ ಗೇಮ್ ಪ್ರಾರಂಭ ಮಾಡಿದ್ದಾರೆ. ಕ್ರೀಡೆಗೆ ಉತ್ತಮ ಸೌಲಭ್ಯಗಳನ್ನು ನೀಡಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡುವೆ : ಹೊರಟ್ಟಿ