Webdunia - Bharat's app for daily news and videos

Install App

ಲೋನ್ ತೀರಿಸಲಾಗದೆ ಗೆಳೆಯನಿಗೆ ಪತ್ನಿಯನ್ನೇ ಒಪ್ಪಿಸಿದ ಪತಿ

Webdunia
ಮಂಗಳವಾರ, 21 ನವೆಂಬರ್ 2023 (11:24 IST)
ಪತ್ನಿಯನ್ನು ಸಾಲಕ್ಕಾಗಿ ಗೆಳೆಯನಿಗೆ ಒಪ್ಪಿಸಿದ್ದ  ವ್ಯಕ್ತಿ, ಕೆಲ ತಿಂಗಳುಗಳ ನಂತರ 30 ಸಾವಿರ ರೂಪಾಯಿಗಳನ್ನು ಮರುಪಾವತಿ ಮಾಡಲು ಬಂದಾಗ, ಸ್ನೇಹಿತ ಹೆಚ್ಚಿನ ಹಣ ಕೇಳಿದ್ದರಿಂದ ಕೋಪಗೊಂಡು ಸ್ನೇಹಿತನನ್ನೇ ಹತ್ಯೆ ಮಾಡಿದ ಘಟನೆ ನಡೆದಿದೆ.
 
ಪೊಲೀಸರ ಪ್ರಕಾರ, ಸಬೀರ್ 30 ಸಾವಿರ ರೂಪಾಯಿಗಳ ಸಾಲಕ್ಕಾಗಿ ತನ್ನ ಪತ್ನಿ ಸಲ್ಮಾಳನ್ನು ಮೊಹಮ್ಮದ್ ಗುಲಾಂ ಬಳಿ ಅಡವಿಟ್ಟು ಹೋಗಿದ್ದ. ನಂತರ ಗುಲಾಂ ಬಿಹಾರ್‌ನಲ್ಲಿನ ತನ್ನ ಮನೆಗೆ ಸಲ್ಮಾಳನ್ನು ಕರೆದುಕೊಂಡು ಹೋಗಿದ್ದ ಎಂದು ಮೂಲಗಳು ತಿಳಿಸಿವೆ.  
 
ವಿಚಿತ್ರ ಪ್ರಕರಣವೊಂದರಲ್ಲಿ ವ್ಯಕ್ತಿಯೊಬ್ಬ 30 ಸಾವಿರ ರೂಪಾಯಿಗಳ ಸಾಲಕ್ಕಾಗಿ ಸ್ನೇಹಿತನ ಬಳಿ ಪತ್ನಿಯನ್ನೇ ಅಡವಿಟ್ಟ ಹೇಯ ಘಟನೆ ವರದಿಯಾಗಿದೆ.
 
ಮೊಹಮ್ಮದ್ ಗುಲಾಂ ಬಿಹಾರ್ ರಾಜ್ಯದ ಆರ್ರಿಯಾ ಜಿಲ್ಲೆಯವನಾಗಿದ್ದು ಸುಮಾರು ಎರಡುವರೆ ವರ್ಷಗಳಿಂದ ಯಮುನಾನಗರದಲ್ಲಿ ವಾಸವಾಗಿದ್ದನು. ಕಳೆದ ಜನೆವರಿ ತಿಂಗಳಲ್ಲಿ ಟಿಫನ್ ಸೇವೆ ಮತ್ತು ಗುತ್ತಿಗೆದಾರರಿಗೆ ಕಾರ್ಮಿಕರನ್ನು ಒದಗಿಸುತ್ತಿದ್ದ ತನ್ನ ಗೆಳೆಯ ಸಬೀರ್ ಅಲಿಗೆ 30 ಸಾವಿರ ರೂಪಾಯಿಗಳನ್ನು ಸಾಲವಾಗಿ ನೀಡಿದ್ದನು ಎನ್ನಲಾಗಿದೆ. 
 
ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಮೊಹಮ್ಮದ್ ಗುಲಾಂ ಮತ್ತು ಸಲ್ಮಾ ಯಮುನಾ ನಗರಕ್ಕೆ ವಾಪಸಾಗಿದ್ದರು. ಆಕ್ಟೋಬರ್ 31 ರವರೆಗೆ ಜೊತೆಯಾಗಿದ್ದರು. ಆದರೆ, ಮಾರನೇ ದಿನವೇ ಮೊಹಮ್ಮದ್ ಗುಲಾಂ ಹತ್ಯೆಯಾಗಿದ್ದನು.
 
ಆರೋಪಿ ಸಬೀರ್ ಪ್ರಕಾರ, ಮೊಹಮ್ಮದ್ ಗುಲಾಂನಿಂದ ಪಡೆದ 30 ಸಾವಿರ ರೂಪಾಯಿಗಳನ್ನು ಹಿಂತಿರುಗಿಸಲು ಹೋದಾಗ ಇನ್ನೂ 20 ಸಾವಿರ ರೂಪಾಯಿಗಳ ಬಡ್ಡಿಯನ್ನು ನೀಡುವಂತೆ ಒತ್ತಾಯಿಸಿದ್ದಾನೆ. ಅದರಂತೆ ಹೆಚ್ಚುವರಿಯಾಗಿ 20 ಸಾವಿರ ರೂಪಾಯಿಗಳನ್ನು ಪಾವತಿಸಿದರೂ ಪತ್ನಿ ಸಲ್ಮಾಳನ್ನು ಕಳುಹಿಸಲು ಮೊಹಮ್ಮದ್ ಗುಲಾಂ ನಿರಾಕರಿಸಿದ್ದಾನೆ. ಇದರಿಂದ ಕೋಪಗೊಂಡು ಪತ್ನಿ ಸಲ್ಮಾ ಜೊತೆ ಸೇರಿ ಹತ್ಯೆ ಮಾಡಿದ್ದೇನೆ ಎಂದು ಆರೋಪಿ ಸಬೀರ್ ತಪ್ಪೊಪ್ಪಿಕೊಂಡಿದ್ದಾನೆ ಎಂದು ಡಿಎಸ್‌ಪಿ ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Bengaluru Rains: ಗ್ರೇಟರ್ ಬೆಂಗಳೂರು ಅಲ್ಲ ಇದು ವಾಟರ್ ಬೆಂಗಳೂರು

ಸಿಲಿಕಾನ್‌ ಸಿಟಿಯಲ್ಲಿ ಮಹಾಮಳೆಗೆ ಮೊದಲ ಬಲಿ: ಗೋಡೆ ಕುಸಿದು ಮಹಿಳಾ ಉದ್ಯೋಗಿ ಸಾವು

ಬೆಂಗಳೂರು-ಕನಕಪುರ ರಸ್ತೆಯಲ್ಲಿ ಬಸ್ ಪಲ್ಟಿ: ಸಬ್‌ಇನ್ಸ್‌ಪೆಕ್ಟರ್‌ ಸೇರಿ ಇಬ್ಬರು ದಾರುಣ ಸಾವು

Arecanut price today: ಬೆಲೆ ಏರಿಕೆ ನಿರೀಕ್ಷೆಯಲ್ಲಿದ್ದ ಅಡಿಕೆ ಬೆಳೆಗಾರರಿಗೆ ನಿರಾಸೆ

Gold Price today: ಚಿನ್ನ ಖರೀದಿದಾರರಿಗೆ ಇಂದು ಮತ್ತೆ ಆತಂಕ

ಮುಂದಿನ ಸುದ್ದಿ
Show comments