Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮೊದಲ ಡಿಟಿಸಿ ಎಲೆಕ್ಟ್ರಿಕ್ ಬಸ್ ಚಾಲನೆ

ಮೊದಲ ಡಿಟಿಸಿ ಎಲೆಕ್ಟ್ರಿಕ್ ಬಸ್ ಚಾಲನೆ
ದೆಹಲಿ , ಸೋಮವಾರ, 17 ಜನವರಿ 2022 (16:02 IST)
ದೆಹಲಿ :  ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೋಮವಾರ ದೆಹಲಿ ಸಾರಿಗೆ ನಿಗಮದ (ಡಿಟಿಸಿ) ಮೊದಲ ಎಲೆಕ್ಟ್ರಿಕ್ ಬಸ್‌ಗೆ ಸಾರಿಗೆ ಸಚಿವ ಕೈಲಾಶ್ ಗಹ್ಲೋಟ್ ಅವರ ಸಮ್ಮುಖದಲ್ಲಿ ಚಾಲನೆ ನೀಡಿದರು.
ಏಪ್ರಿಲ್ ವೇಳೆಗೆ ಇನ್ನೂ 300 ಎಲೆಕ್ಟ್ರಿಕ್ ಬಸ್‌ಗಳು ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಇ-44 ಸಂಖ್ಯೆಯ, 12 ಮೀಟರ್ ಉದ್ದದ, ಲೋ ಫ್ಲೋರ್ ಎಸಿ ಬಸ್ ಸೋಮವಾರ ಐಪಿ ಡಿಪೋ ಮತ್ತು ಪ್ರಗತಿ ಮೈದಾನದ ನಡುವೆ ಸಂಚರಿಸಿತು.

ಇದು ಸಿಸಿಟಿವಿ ಮತ್ತು ಪ್ಯಾನಿಕ್ ಬಟನ್‌ನಂತಹ ಇತರ ಸೌಲಭ್ಯಗಳ ಜೊತೆಗೆ ಅಂಗವಿಕಲರಿಗಾಗಿ ರಾಂಪ್ ಅನ್ನು ಹೊಂದಿದೆ.  “ಇದು ದೆಹಲಿಯಲ್ಲಿ ಕಾರ್ಯಾಚರಿಸುತ್ತಿರುವ ಮೊದಲ ಎಲೆಕ್ಟ್ರಿಕ್ ಬಸ್ ಆಗಿದೆ. ಇದು ಹಲವು ವಿಧಗಳಲ್ಲಿ ಮುಖ್ಯವಾಗಿದೆ. ದೆಹಲಿಯಲ್ಲಿ ಸಾರಿಗೆ ಕ್ಷೇತ್ರದಲ್ಲಿ ಇದು ಹೊಸ ಯುಗಕ್ಕೆ ನಾಂದಿಯಾಗಿದೆ ಎಂದು ಕೇಜ್ರಿವಾಲ್ ಸಮಾರಂಭದಲ್ಲಿ ಹೇಳಿದರು. 

ಏಪ್ರಿಲ್ ವೇಳೆಗೆ, ದೆಹಲಿಗೆ ಇನ್ನೂ 300 ಬಸ್‌ಗಳು ತಲುಪುವ ನಿರೀಕ್ಷೆಯಿದೆ. ಮುಂಬರುವ ವರ್ಷಗಳಲ್ಲಿ ಸುಮಾರು 2,000 ಎಲೆಕ್ಟ್ರಿಕ್ ಬಸ್‌ಗಳನ್ನು ಓಡಿಸುವುದು ನಮ್ಮ ಗುರಿಯಾಗಿದೆ ಎಂದು ಅವರು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆ ನೋಂದಣಿ ಸೇವೆ ಸ್ಥಗಿತ!