Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಶರ್ಟ್ ಧರಿಸದೇ ಸಭೆಗೆ ಹಾಜರಾದ ಶಿಕ್ಷಣ ಇಲಾಖೆ ಅಧಿಕಾರಿ!

ಶರ್ಟ್ ಧರಿಸದೇ ಸಭೆಗೆ ಹಾಜರಾದ ಶಿಕ್ಷಣ ಇಲಾಖೆ ಅಧಿಕಾರಿ!
ಲಕ್ನೋ , ಬುಧವಾರ, 14 ಜೂನ್ 2023 (14:53 IST)
ಲಕ್ನೋ : ಉತ್ತರಪ್ರದೇಶದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಶರ್ಟ್ ಧರಿಸದೇ ಸಭೆಗೆ ಹಾಜರಾಗಿ ಫಜೀತಿಗೆ ಒಳಗಾಗಿದ್ದಾರೆ.

ಪರಿಶೀಲನಾ ಸಭೆಯಲ್ಲಿ ಶಿಕ್ಷಣ ಇಲಾಖೆ ಮಹಾನಿರ್ದೇಶಕ ವಿಜಯ್ ಕಿರಣ್ ಆನಂದ್, ವಿವಿಧ ಜಿಲ್ಲೆಗಳಲ್ಲಿ ನಿಯೋಜನೆಗೊಂಡಿರುವ ಅಧಿಕಾರಿಗಳೊಂದಿಗೆ ಇಲಾಖಾ ಯೋಜನೆಗಳ ಪ್ರಗತಿ ಕುರಿತು ಚರ್ಚಿಸಲು ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆ ಕರೆದಿದ್ದರು. ಈ ಸಭೆಗೆ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಶರ್ಟ್ ಹಾಕದೆ, ಬನಿಯನ್ ಧರಿಸಿ ಬಂದಿದ್ದರು.

ಇದನ್ನು ಗಮನಿಸಿದ ವಿಜಯ್ ಕಿರಣ್ ಆನಂದ್ ಅವರು ಅಧಿಕಾರಿಯ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಬನಿಯನ್ ಧರಿಸಿ ವಿಡಿಯೋ ಕಾನ್ಫರೆನ್ಸ್ ಸಭೆಗೆ ಹಾಜರಾಗಿರುವುದನ್ನು ಅನುಚಿತ ವರ್ತನೆ ಎಂದು ಪರಿಗಣಿಸಿ ಕೆಲಸದಿಂದ ಅಮಾನತು ಮಾಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಶೂ ಧರಿಸಿಯೇ ಗುದ್ದಲಿಪೂಜೆ, ಮಂಗಳಾರತಿ ಪಡೆದ ಸಿಎಂ, ಸಚಿವರು