ಬಿಎಸ್ಎಫ್`ನ ಕಳಪೆ ಆಹಾರದ ವಿಡಿಯೋವನ್ನ ಫೇಸ್ಬುಕ್`ನಲ್ಲಿ ಹಾಕಿ ವಿವಾದಕ್ಕೀಡಾಗಿದ್ದ ಮಾಜಿ ಯೋಧ ತೇಜ್ ಬಹದ್ದೂರ್ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಮುಂಬೈನಲ್ಲಿ ಏರ್ಪಡಿಸಿದ್ದ ಹುತಾತ್ಮ ಯೋಧರಿಗೆ ಗೌರವ ಅರ್ಪಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ತೇಜ್ ಬಹದ್ದೂರ್, ಬಿಎಸ್ಎಫ್`ನ ಶೇ.80ರಷ್ಟು ಅಧಿಕಾರಿಗಳು ಭ್ರಷ್ಟರು ಎಂದು ಹೇಳಿದ್ದಾರೆ.
ಈ ಭ್ರಷ್ಟತನ ಬಯಲು ಮಾಡಿದ ನನ್ನನ್ನ ಸೇವೆಯಿಂದ ವಜಾ ಮಾಡಲಾಗಿದೆ. ಸೆಕ್ಷನ್ 117ರ ಪ್ರಕಾರ, ಸೇವೆಯಿಂದ ವಜಾ ಪ್ರಶ್ನಿಸಿ ಡಿಜಿ ಮೇಲ್ಮನವಿ ಸಲ್ಲಿಸಲು 3 ತಿಂಗಳ ಅವಕಾಶವಿದೆ. ಅದು ಸಾಧ್ಯವಾಗದಿದ್ದರೆ ಕೋರ್ಟ್ ಮೆಟ್ಟಿಲೇರುವುದಾಗಿ ಹೇಳಿದ್ದಾರೆ.
ಕಳಪೆ ಆಹಾರವಷ್ಠೆ ಅಲ್ಲ, ಯೋಧರಿಗಾಗಿ ಸರ್ಕಾರ ಕೊಡುವ ಹಣವನ್ನೂ ಅಧಿಕಾರಿಗಳು ಹೇಗೆ ಗುಳುಂ ಮಾಡುತ್ತಾರೆ ಎಂಬುದನ್ನೂ ತೇಜ್ ಬಹದ್ದೂರ್ ಬಯಲು ಮಾಡಿದ್ದಾರೆ. ಸರ್ಕಾರ ನಮಗೆ 18 ವಿಧಧ ಆಹಾರ ಕಳುಹಿಸಿಕೊಡುತ್ತೆ. ಆದರೆ, ಯೋಧರಿಗೆ ಸಿಗುವುದು ಕಿಚಡಿ ಮಾತ್ರ. ವ್ಯವಸ್ಥೆಯೇ ಭ್ರಷ್ಟವಾಗಿದೆ. ಶೇ.80ರಷ್ಟು ಅಧಿಕಾರಿಗಳು ಭ್ರಷ್ಟರು.
ಇದೇವೇಳೆ, ಸೇನೆಯಲ್ಲಿರುವ ಭ್ರಷ್ಟಾಚಾರ ತೊಲಗಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರಲು ಮೇ 14ರಂದು ಜಂತರ್ ಮಂತರ್`ನಲ್ಲಿ ಪ್ರತಿಭಟನೆ ನಡೆಸುವುದಾಗಿ ತೇಜ್ ಬಹದ್ದೂರ್ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ