Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನೀಟ್ ಪರೀಕ್ಷೆ ವೇಳೆ ವಿದ್ಯಾರ್ಥಿನಿಯ ಒಳ ಉಡುಪು ಬಿಚ್ಚಿಸಿದರಾ..?

ನೀಟ್ ಪರೀಕ್ಷೆ ವೇಳೆ ವಿದ್ಯಾರ್ಥಿನಿಯ ಒಳ ಉಡುಪು ಬಿಚ್ಚಿಸಿದರಾ..?
ಕಣ್ಣೂರು , ಸೋಮವಾರ, 8 ಮೇ 2017 (19:24 IST)
ನೀಟ್ ಪರೀಕ್ಷೆ ವೇಳೆ ವಿದ್ಯಾರ್ಥಿನಿಯ ಒಳ ಉಡುಪು ಬಿಚ್ಚಲು ಹೇಳಿ ಪರೀಕ್ಷಾಧಿಕಾರಿಗಳು ಅಪಮಾನ ಎಸಗಿರುವ ಘಟನೆ ಕೇರಳದ ಕಣ್ಣೂರಿನಿಂದ ವರದಿಯಾಗಿದೆ.

ಕಾಸರಗೋಡು ಮೂಲದ ವಿದ್ಯಾರ್ಥಿನಿ ಕಣ್ಣೂರಿನ ಟಿಸ್ಕ್ ಇಂಗ್ಲೀಷ್ ಸ್ಕೂಲ್`ನಲ್ಲಿ ಪರೀಕ್ಷೆಗೆ ಹಾಜರಾಗಿದ್ದರು. ಲೋಹ ಹುಕ್ಕುಗಳಿದ್ದ ಹಿನ್ನೆಲೆಯಲ್ಲಿ ಮೆಟಲ್ ಡಿಟೆಕ್ಟರ್`ನಲ್ಲಿ ಬೀಫ್ ಸೌಂಡ್, ಬಂದ ಹಿನ್ನೆಲೆಯಲ್ಲಿ ಮಹಿಳೆಯ ಕಂಚುಕವನ್ನ ತೆಗೆಯಲು ಸೂಚಿಸಿದ್ದಾರೆ.
`ಅವರು ನನ್ನ ಒಳ ಉಡುಪು ತೆಗೆಯಲು ಸೂಚಿಸಿದರು. ಅದಾಗಲೇ 9.20ರ ಸಮಯವಾಗಿತ್ತು. ಪರೀಕ್ಷೆ ಆರಂಭವಾಗಲು 10 ನಿಮಿಷ ಮಾತ್ರವೇ  ಉಳಿದಿತ್ತು. ಒಳ ಉಡುಪು ತೆಗೆಯಲು ಶೌಚಾಲಯ ಬಳಸಲು ಕೇಳಿದೆ. ಅವಕಾಶ ಕೊಡಲಿಲ್ಲ. ಅದೃಷ್ಟವಶಾತ್ ಮಹಿಳೆ ಇನ್ವಿಜಿಲೇಟರ್ ಅಲ್ಲಿದ್ದರು. ಅಲ್ಲೇ ನನ್ನ ಒಳ ಉಡುಪು ಬಿಚ್ಚಿದೆ ಎಂದು ವಿದ್ಯಾರ್ಥಿನಿ ನೋವು ತೋಡಿಕೊಂಡಿದ್ದಾರೆ.

ಆ ಘಟನೆ ಒಂದು ವರ್ಷದಿಂದ ಪರೀಕ್ಷೆಗೆ ತಯಾರಿ ನಡೆಸಿದ್ದ ನನ್ನ ಆತ್ಮಸ್ಥೈರ್ಯವನ್ನೇ ಕುಂದಿಸಿಬಿಟ್ಟಿತು ಎಂದು ವಿದ್ಯಾರ್ಥಿನಿ ಹೇಳಿಕೊಂಡಿದ್ದಾಳೆ. ಹಲವು ವಿದ್ಯಾರ್ಥಿನಿಯರಿಗೂ ಇದೇ ಪರಿಸ್ಥಿತಿಯಾಗಿರುವ ಬಗ್ಗೆ ವರದಿಯಾಗಿದೆ. ನೀಟ್ ನಿಯಮಾವಳಿಯಲ್ಲಿ ಈ ರೀತಿಯ ಅಂಶಗಳಿವೆ ಎಂಬ ಪ್ರಶ್ನೆ ಎದ್ದಿದೆ. ಇಲ್ಲವೇ ಅಧಿಕಾರಿಗಳೇ ದುರುಪಯೋಗ ಮಾಡಿಕೊಂಡರೆ ಎಂಬ ಪ್ರಶ್ನೆಗೆ ತನಿಖೆಗೆ ಬಳಿಕವೇ ಉತ್ತರ ಸಿಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

14 ವರ್ಷದ ವಿದ್ಯಾರ್ಥಿ ಜೊತೆ 38 ವರ್ಷದ ಮಹಿಳೆ ಕಾಮದಾಟ ಬಯಲು..!