ಬೆಂಗಳೂರು: ಪತಿಯೊಂದಿಗೆ ಮನಸ್ತಾಪದಿಂದ ಮನನೊಂದಿದ್ದ ಟೆಕ್ಕಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದಲ್ಲಿ ನಡೆದಿದೆ.
ಪತ್ನಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದು, ಪತಿ ಬ್ಯಾಂಕ್ ಉದ್ಯೋಗಿಯಾಗಿದ್ದ. ನಾಲ್ಕು ತಿಂಗಳ ಹಿಂದಷ್ಟೇ ಇವರು ಪ್ರೀತಿಸಿ ಮದುವೆಯಾಗಿದ್ದರು. ಆದರೆ ಮದುವೆಯಾದ ಮೇಲೆ ಇಬ್ಬರ ನಡುವೆ ಆಗಾಗ ಮನಸ್ತಾಪಗಳಾಗುತ್ತಿತ್ತು. ಇದರಿಂದ ಮನನೊಂದ ಪತ್ನಿ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದಾಳೆ.
ಇದೀಗ ಪತಿಯ ವಿರುದ್ಧ ಮಹಿಳೆಯ ಪೋಷಕರು ವರದಕ್ಷಿಣೆ ಕಿರುಕುಳ ಆರೋಪ ಮಾಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಆತ ಮಾಡಿದ್ದ ಸಾಲ ಮಗಳು ತೀರಿಸಿದ್ದಳು. ಅದೂ ಸಾಲದ್ದಕ್ಕೆ, ಚಿನ್ನದ ಸರ, ಸೈಟ್ ತೆಗೆಸಿಕೊಡಲು ಕಿರುಕುಳ ನೀಡುತ್ತಿದ್ದ ಎಂದು ಪೋಷಕರು ಆರೋಪಿಸಿದ್ದಾರೆ. ಇದೀಗ ಪತಿಯ ವಿರುದ್ಧ ಪ್ರಕರಣ ದಾಖಲಾಗಿದೆ.