Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಚೆನ್ನೈ: ಮಕ್ಕಳು ಕಾರಿನೊಳಗೆ ಆಟವಾಡುವುದರಿಂದ ಆಗುವ ಅನಾಹುತವೇನು ಎಂಬುದು ಈ ಘಟನೆಯಿಂದ ಮತ್ತೆ ಪ್ರೂವ್ ಆಗಿದೆ.
10 ವರ್ಷದೊಳಗಿನ ಪ್ರಾಯದ ಮೂವರು ಮಕ್ಕಳು ತಮಿಳುನಾಡಿನಲ್ಲಿ ಆಟವಾಡಲು ಪಾರ್ಕ್ ಮಾಡಿದ್ದ ಕಾರೊಳಗೆ ಸೇರಿಕೊಂಡಿದ್ದರು. ಒಳಗೆ ಕೂತ ಮೇಲೆ ಕಾರ್ ಲಾಕ್ ಆಗಿದೆ.
ಆದರೆ ಇದು ಯಾರ ಗಮನಕ್ಕೂ ಬಂದಿರಲಿಲ್ಲ. ಕೆಲವು ಸಮಯದ ನಂತರ ಉಸಿರುಗಟ್ಟಲು ಶುರುವಾಗಿದೆ. ಆದರೆ ಕಾರ್ ಲಾಕ್ ಆಗಿ ಮಕ್ಕಳಿಗೆ ಅದನ್ನು ತೆರೆಯಲು ಸಾಧ್ಯವಾಗಲಿಲ್ಲ. ಅತ್ತ ಪೋಷಕರಿಗೂ ಇದು ಗಮನಕ್ಕೆ ಬರಲಿಲ್ಲ. ಪರಿಣಾಮ ಮೂವರೂ ಮಕ್ಕಳು ಕಾರೊಳಗೇ ಸಾವನ್ನಪ್ಪಿದ್ದಾರೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.