ನವದೆಹಲಿ-ಬಿಜೆಪಿಯೂ ಏನಿಲ್ಲ ಅಂದರೂ ೩೭೦ ಸ್ಥಾನಗಳನ್ನು ಗೆದ್ದು ಚರಿತ್ರೆ ಬರೆಯಲಿದೆ ಅನ್ನೋದು ಮೋದಿಯ ಅಚಲವಾದ ವಿಶ್ವಾಸ.. ಅದೇ ರೀತಿಯಾಗಿ ಅಮಿತ್‌ಶಾಗೇ ಕೂಡ ಪಾರ್ಟಿಯನ್ನು ಅತಿ ಹೆಚ್ಚು ಸ್ಥಾನಗಳನ್ನು ಗಳಿಸುವ ಮೂಲಕ ಪಾರುಪತ್ಯ ಸಾಧಿಸಬೇಕೆಂಬ ಹಂಬಲ ಇದೆ. ಇದಕ್ಕಾಗಿ ಇಡೀ ಎನ್‌ಡಿಎ ಮೈತ್ರಿಯೂ ಸೇರಿಕೊಂಡ್ರೆ ಬರೊಬ್ಬರಿ ೪೦೦ ಗೆಲ್ಲೋದು ಬಿಜೆಪಿಯ ಅಸಲಿ ಲೆಕ್ಕಾಚಾರ. ಇತ್ತಾ ಅಮಿತ್‌ಶಾ ಈಗಾಗಲೇ ಮತ್ತೆ ನಾವೇ ವಿನ್ ಅಂತ ಘಂಟಘೋಷವಾಗಿ ಹೇಳಿದ್ದಾರೆ.
ಇವತ್ತು ದೇಶದ ರಾಜಕಾರಣದ ದಿಕ್ಕು ಯಾವ ಕಡೆಗೆ ಸಾಗುತ್ತಿದೆ ಅನ್ನೋದನ್ನ ಈ ಕ್ಷಣದಲ್ಲೇ ಊಹಿಸೋದು ಕಷ್ಟ. ಸದ್ಯದ ರಾಷ್ಟçಕಾರಣದ ಚಿತ್ತವನ್ನು ನೋಡಿದರೆ, ಮತ್ತೆ ಮೋದಿ ನೇತೃತ್ವದ ಬಿಜೆಪಿ ಸರ್ಕಾರವೇ ಮೂರನೇ ಬಾರಿಗೂ ಅಧಿಕಾರವನ್ನು ಮರಳಿ ಹಿಡಿಯುವ ಲಕ್ಷಣ ಕಾಣ್ತಿದೆ. ಇದಕ್ಕೆ ಕಾರಣ ಒಂದು ಮೋದಿಯ ಹವಾ ಮತ್ತೆ ಚುರುಕಾಗಿರೋದು. ಇನ್ನೊಂದು ಕಾಂಗ್ರೆಸ್ ಪಂಚರಾಜ್ಯಗಳ ಎಲೆಕ್ಷನ್‌ನಲ್ಲಿ ಅಘಾತ ಅನುಭವಿಸಿದ ಕಾರಣ, ಇಡೀ ಇಂಡಿಯಾ ಕೂಟದಲ್ಲಿ ದೊಡ್ಡ ಬಿರುಕು ಮೂಡಿರೋದು.
ಮೂರು ತಿಂಗಳಲ್ಲಿ ಲೋಕಸಭೆಯ ಚುನಾವಣೆ ಮುಗಿದು ಯಾರು ಅಧಿಕಾರವನ್ನು ಹಿಡಿಯಲಿದ್ದಾರೆ ಅನ್ನೋದಕ್ಕೆ ಬಹುತೇಕ ಉತ್ತರ ಸಿಗಲಿದೆ. ಬಿಜೆಪಿಗೆ ಮತ್ತೆ ನಾವೇ ಗೆಲ್ತೀವಿ ಅನ್ನುವ ದೃಢ ವಿಶ್ವಾಸ ಬಂದಿದೆ. ಹೀಗೆ ಹೋಪ್ ಕ್ರಿಯೆಟ್ ಆಗೋದಕ್ಕೂ ಹಲವು ಕಾರಣಗಳಿವೆ. ಅದು ಯಾಕೆ ಹೇಗೆ ಅನ್ನೋದರ ಕುರಿತು ಮಾತನಾಡೋಣ, ಆದ್ರೆ ಇವಾಗ ಗೃಹಸಚಿವ ಅಮಿತ್ ಶಾ ಬಾಯಲ್ಲಿ ೩೭೦ ಸ್ಥಾನಗಳನ್ನು ಬಿಜೆಪಿ ಗೆಲ್ಲಲ್ಲಿದೆ ಅನ್ನುವ ಹೇಳಿಕೆ ಬಂದಿದೆ ಇದಕ್ಕೂ ಮೊದಲು ಲೋಕಸಭೆಯಲ್ಲಿ ಪ್ರಧಾನಿ ಮೋದಿಯೂ ಕೂಡ ಎನ್‌ಡಿಎ ೪೦೦ ರೀಚ್ ಆಗುತ್ತೆ ಇದರಲ್ಲಿ ಬಿಜೆಪಿಗೆ ೩೭೦ ಸ್ಥಾನಗಳು ಅಂತ ನಮೋ ಕಾಂಗ್ರೆಸ್ಗೆ ಟಾಂಗ್ ನೀಡಿದ್ದರು.ಇದೀಗ ಚಾಣಕ್ಯ ಅಮಿತ್ ಶಾ ಕೂಡ ಮೋದಿಯ ಮಾತಿಗೆ ಧ್ವನಿಗೂಡಿಸಿದ್ದಾರೆ. ೩೭೦ ಸ್ಥಾನ ಬಿಜೆಪಿಗೆ ಫಿಕ್ಸ್, ಎನ್‌ಡಿಎ ಮೈತ್ರಿಯೂ ೪೦೦ರ ಗಡಿ ದಾಟಲಿದೆ ಅಂತ ಅಮಿತ್‌ಶಾ ಹೇಳಿದ್ದಲ್ಲದೇ, ಮೂರನೇ ಬಾರಿಗೂ ನಮ್ದೇ ಸರ್ಕಾರ ಅಂದಿದ್ದಾರೆ