ಬೆಂಗಳೂರು-ಆಕ್ರಮ ಆಸ್ತಿ ಪ್ರಕರಣ ಸಂಬಂಧ ಡಿಸಿಎಂ ಡಿ ಕೆ ಶಿವಕುಮಾರ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.ಅಕ್ರಮ ಆಸ್ತಿ ಪ್ರಕರಣದಲ್ಲಿ ಲೋಕಾಯುಕ್ತ ಡಿಸಿಎಂ ಡಿ ಕೆ ಶಿವಕುಮಾರ್ ಮೇಲೆ ಎಫ್ ಐ ಆರ್ ದಾಖಲುಮಾಡಿದೆ.ಇತ್ತೀಚೆಗಷ್ಟೇ ಸಿಬಿಐ ತನಿಖೆ ವಾಪಸ್ ಪಡೆಯುವ ಬಗ್ಗೆ ಸಂಪುಟದಲ್ಲಿ ಸರ್ಕಾರ ತೀರ್ಮಾನ ತೆಗದುಕೊಂಡಿದ್ದು,ಸಿಬಿಐ ಬದಲು ಲೋಕಾಯುಕ್ತಗೆ ಸರ್ಕಾರ ತನಿಖೆ ಮಾಡಲು ವರ್ಗಾವಣೆ ಮಾಡಿದೆ.
ಇದೀಗ ಡಿಸಿಎಂ ಡಿ ಕೆ ಶಿವಕುಮಾರ್ ಮೇಲೆ ಲೋಕಾಯುಕ್ತ ಎಫ್ ಐ ಆರ್ ದಾಖಲು ಮಾಡಿದ್ದು,ಒಂದು ಕಡೆ ಸಿಬಿಐ ನಿಂದ ಡಿ ಕೆ ಶಿವಕುಮಾರ್ ನೋಟಿಸ್ ಮತ್ತೊಂದು ಕಡೆ ಲೋಕಾಯುಕ್ತಯಿಂದ ಫೆಬ್ರವರಿ 8 ರಂದು ಎಫ್ ಐ ಆರ್ ದಾಖಲಾಗಿದೆ.ಕನಕಪುರ ಬಂಡೆಗೆ ಅಕ್ರಮ ಆಸ್ತಿ ಪ್ರಕರಣ ನಿಲ್ಲದ ಉರುಳಾಗಿದೆ.