Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಫಾರ್ಮ್ ಹೌಸ್ ಮೇಲೆ ಸಿಸಿಬಿ ಪೊಲೀಸರ ದಾಳಿ ಜೀವಂತ ವನ್ಯಜೀವಿಗಳು ಪತ್ತೆ

ಫಾರ್ಮ್ ಹೌಸ್  ಮೇಲೆ ಸಿಸಿಬಿ ಪೊಲೀಸರ ದಾಳಿ ಜೀವಂತ ವನ್ಯಜೀವಿಗಳು ಪತ್ತೆ
bangalore , ಗುರುವಾರ, 22 ಡಿಸೆಂಬರ್ 2022 (14:07 IST)
ಎಸ್ ಎಸ್ ಮಲ್ಲಿಕಾರ್ಜುನ್ ಫಾರ್ಮ್‌ ಹೌಸ್‌ ಮೇಲೆ ಸಿಸಿಬಿ ದಾಳಿ ವೇಳೆ ಫಾರ್ಮ್ ಹೌಸ್ ನಲ್ಲಿ ಕೆಲ ವನ್ಯಜೀವಿಗಳು ಪತ್ತೆಯಾಗಿದೆ.ಎಸ್‌.ಎಸ್‌.ಮಲ್ಲಿಕಾರ್ಜುನ್‌ ಒಡೆತನದ ಕಲ್ಲೇಶ್ವರ ಮಿಲ್‌ ಹಿಂಭಾಗದ ಫಾರ್ಮ್‌ ಹೌಸ್‌ ಮೇಲೆ ದಾಳಿ ನಡೆದಿದ್ದು,ಸಿಸಿಬಿ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿದ್ದು, ಕೆಲ ವನ್ಯಜೀವಿಗಳಾದ 7 ಚುಕ್ಕೆ ಜಿಂಕೆಗಳು, 10 ಕೃಷ್ಣಮೃಗಗಳು, 7 ಕಾಡುಹಂದಿಗಳು, 3 ಮುಂಗುಸಿಗಳು, 2 ನರಿಗಳು ಪತ್ತೆ ಯಾಗಿದೆ.ಪ್ರಾಣಿಗಳನ್ನು ರಕ್ಷಿಸಿ ಸಿಸಿಬಿ ಪೊಲೀಸರು ಅರಣ್ಯ ಇಲಾಖೆಗೆ ಹಸ್ತಾಂತರಿಸಿದಾರೆ.
 
ಬೆಂಗಳೂರಿನ ಹೆಬ್ಬಾಳದಲ್ಲಿ ಸೆಂಥಿಲ್ ನನ್ನ ಪೊಲೀಸರು ಬಂಧಿಸಿದ್ದಾರೆ.ಡಿ.18ರಂದು ಜಿಂಕೆ ಚರ್ಮ, ಕೊಂಬು, ಮೂಳೆ ಮಾರಾಟ ಮಾಡುತ್ತಿದ್ದಾಗ ಸೆಂಥಿಲ್‌ ನನ್ನ ಸಿಸಿಬಿ ಪೊಲೀಸರು ಬಂಧನ ಮಾಡಲಾಗಿದ್ದು,ಸೆಂಥಿಲ್‌ ವಶಕ್ಕೆ ಪಡೆದು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.ತನಿಖೆ ವೇಳೆ ದಾವಣಗೆರೆಯಿಂದ ಚರ್ಮ ತಂದಿರುವುದಾಗಿ ಆರೋಪಿ ಬಾಯ್ಬಿಟ್ಟಿದ್ದ . ಸೇಂಥಿಲ್ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿದಾರೆ.ಕಾರ್ಯಾಚರಣೆ ವೇಳೆ ಜೀವಂತ ವನ್ಯಪ್ರಾಣಿಗಳು ಸಿಕ್ಕಿರುವ ಮಾಹಿತಿ ಲಭಿಸಿದ್ದು,ಫಾರ್ಮ್‌ನಲ್ಲಿದ್ದ ಕಾರ್ಮಿಕರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ.
 
ಮುಂದಿನ ಕ್ರಮಕ್ಕೆ ಪ್ರಕರಣವನ್ನು ಸ್ಥಳೀಯ ಅರಣ್ಯ ಇಲಾಖೆಗೆ ಹಸ್ತಾಂತರಿಸಿದಾರೆ.ಸ್ಥಳೀಯ ಪೊಲೀಸರಿಗೆ ಸಿಸಿಬಿ ಪೊಲೀಸರು ಸೆಂಥಿಲ್‌ನನ್ನು ಹಸ್ತಾಂತರಿಸಿದಾರೆ.ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗಿದೆ.ಶೀಘ್ರವೇ ವಿಶೇಷ ತನಿಖಾಧಿಕಾರಿ ನೇಮಿಸಿ ಪ್ರಕರಣದ ತನಿಖೆ ಆರಂಭವಾಗಲಿದೆ.ಪರವಾನಗಿ ಪಡೆದೇ ವನ್ಯಜೀವಿಗಳನ್ನು ಸಾಕಿದ್ದೆವು ಎಂಬುದಾಗಿ ಎಸ್ ಎಸ್ ಮಲ್ಲಿಕಾರ್ಜುನ್ ಆಪ್ತರ ಮಾಹಿತಿ ಲಭಿಸಿದ್ದು,2000ರಿಂದಲೇ ನಮ್ಮ ಫಾರ್ಮ್‌ ಹೌಸ್‌ನಲ್ಲಿ ಜಿಂಕೆ ಸಾಕುತ್ತಿದ್ದೆವು.ಇವುಗಳನ್ನು ನೋಡಿಕೊಳ್ಳುತ್ತಿದ್ದ ವ್ಯಕ್ತಿ ಕಾನೂನು ಬಾಹಿರವಾಗಿ ಪ್ರಾಣಿಗಳ ಚರ್ಮ, ಕೊಂಬು ಮಾರಾಟ ಮಾಡಿದ್ದಾನೆ.ಪರವಾನಗಿ ಪಡೆದು ಸಾಕುತ್ತಿದ್ದ ನಾಲ್ಕೈದು ಜಿಂಕೆಗಳು ಮರಿ ಹಾಕಿದ್ದರಿಂದ ಇವುಗಳ ಸಂಖ್ಯೆ ಈಗ ಹೆಚ್ಚಾಗಿದೆ.ಇತ್ತಿಚೆಗೆ ಜನಿಸಿದ ಮರಿಗಳ ಸಾಕುವ ಪರವಾನಗಿ ಪಡೆಯಬೇಕಿದೆ.ಕಾನೂನು ಪ್ರಕಾರವೇ ನಾವು ಸಾಕುತ್ತಿದ್ದೇವೆ ಎಂದು ಎಸ್‌. ಮಲ್ಲಿಕಾರ್ಜುನ್‌ ಆಪ್ತರಿಂದ ಮಾಹಿತಿ ಲಭ್ಯವಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಚೀನಾದಲ್ಲಿ ಕೋವಿಡ್ ಹೆಚ್ಚಾಗುತ್ತಿದ್ದಂತೆ ನಗರದಲ್ಲಿ ಕೋವಿಡ್ ನಿಯಮ ಪಾಲಿಸುವಂತೆ ಸೂಚನೆ