ಪ್ರಸ್ತುತ ಜಾರಿಯಲ್ಲಿರುವ ನೋಟುಗಳು ಮತ್ತು ಬ್ಯಾಂಕ್ ನೋಟುಗಳ ಬದಲಾವಣೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸ್ಪಷ್ಟಪಡಿಸಿದೆ.
ಬ್ಯಾಂಕ್ ನೋಟುಗಳನ್ನು ಮಹಾತ್ಮ ಗಾಂಧಿ ಫೋಟೊ ತೆಗೆದು ಹೊಸ ನೋಟುಗಳನ್ನು ಬಿಡುಗಡೆ ಮಾಡಲಿದ್ದು, ಹಳೆಯ ನೋಟುಗಳನ್ನು ವಾಪಸ್ ಪಡೆಯಲಿದೆ ಎಂಬ ವದಂತಿ ಹರಡಿದ್ದು, ಈ ಬಗ್ಗೆ ಆರ್ ಬಿಐ ಮೌನ ವಹಿಸಿರುವುದು ಅನುಮಾನ ಮಾಡಿಸಿದೆ ಎಂದು ವರದಿ ಪ್ರಕಟವಾಗಿತ್ತು.
ಈ ಹಿನ್ನೆಲೆಯಲ್ಲಿ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಆರ್ ಬಿಐ, ಮಾಧ್ಯಮದ ಒಂದು ವರ್ಗ ಈ ನೋಟು ಬದಲಾವಣೆ ಕುರಿತ ವರದಿಗಳನ್ನು ಪ್ರಕಟಿಸಿವೆ. ಆದರೆ ಇದು ಸತ್ಯಕ್ಕೆ ದೂರವಾಗಿದೆ. ನೋಟು ಅಥವಾ ಬ್ಯಾಂಕ್ ನೋಟುಗಳ ಬದಲಾವಣೆ ಪ್ರಸ್ತಾಪ ಇಲ್ಲ ಎಂದು ತಿಳಿಸಿದೆ.