ಚಂಡೀಗಢ : ಖಾಲಿಸ್ತಾನ ಪ್ರತ್ಯೇಕವಾದಿಗಳ ಕೂಗು ಹೆಚ್ಚುತ್ತಿದ್ದು, ಇಂದು ಪಂಜಾಬ್ನ ಅಮೃತಸರದಲ್ಲಿರುವ ಸಿಖ್ರ ಪವಿತ್ರ ಸ್ಥಳ ಗೋಲ್ಡನ್ ಟೆಂಪಲ್ನ ಪ್ರವೇಶದ್ವಾರದಲ್ಲಿ ಜನರ ಗುಂಪು ಭಿಂದ್ರನ್ವಾಲೆ ಪರ ಪೋಸ್ಟರ್ಗಳನ್ನು ಹಿಡಿದು ಘೋಷಣೆ ಕೂಗಿದ್ದಾರೆ.
38ನೇ ಆಪರೇಷನ್ ಬ್ಲೂಸ್ಟಾರ್ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ. ಕಳೆದ ವಾರ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಆಪರೇಷನ್ ಬ್ಲೂಸ್ಟಾರ್ ವಾರ್ಷಿಕೋತ್ಸವದ ಮೊದಲು ಕಾನೂನು ಮತ್ತು ಸುವ್ಯವಸ್ಥೆಯನ್ನು ಪರಿಶೀಲಿಸಿದ್ದರು. ನಂತರ ಶಾಂತಿಯನ್ನು ಕಾಪಾಡಲು ಪೊಲೀಸರಿಗೆ ಸೂಚಿಸಿದ್ದರು.
ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಗೋಲ್ಡನ್ ಟೆಂಪಲ್ ಸುತ್ತಲೂ ಸೆಕ್ಷನ್ 144 ಅನ್ನು ವಿಧಿಸಲಾಗಿತ್ತು. ದೇವಸ್ಥಾನಕ್ಕೆ ಯಾವುದೇ ರೀತಿಯ ಆಯುಧಗಳನ್ನು ಒಯ್ಯುವುದನ್ನು ನಿಷೇಧಿಸಲಾಗಿತ್ತು. ಆದರೆ ಬೆಳಗಿನ ಪ್ರಾರ್ಥನಾ ಸಭೆಯ ನಂತರ ನೂರಕ್ಕೂ ಹೆಚ್ಚು ಜನರು ಹೊರಗೆ ಜಮಾಯಿಸಿ ಘೋಷಣೆ ಕೂಗಿದ್ದಾರೆ.