Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ದೆಹಲಿ ವಿಮಾನ ನಿಲ್ದಾಣದಲ್ಲಿ ಅನುಮಾನಸ್ಪದ ಬ್ಯಾಗ್ ಪತ್ತೆ: ಕ್ರಿಕೆಟಿಗರ ಭದ್ರತೆ ಹೆಚ್ಚಳ

ದೆಹಲಿ ವಿಮಾನ ನಿಲ್ದಾಣದಲ್ಲಿ ಅನುಮಾನಸ್ಪದ ಬ್ಯಾಗ್ ಪತ್ತೆ: ಕ್ರಿಕೆಟಿಗರ ಭದ್ರತೆ ಹೆಚ್ಚಳ
ನವದೆಹಲಿ , ಶುಕ್ರವಾರ, 1 ನವೆಂಬರ್ 2019 (09:30 IST)
ನವದೆಹಲಿ: ದೆಹಲಿಗೆ ನವಂಬರ್ ಮೊದಲ ವಾರದಲ್ಲಿ ಉಗ್ರರ ದಾಳಿ ಭೀತಿಯಿದೆ ಎಂಬ ಎನ್ ಐಎ ವರದಿ ಬೆನ್ನಲ್ಲೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅನುಮಾನಸ್ಪದ ಬ್ಯಾಗ್ ಪತ್ತೆಯಾಗಿ ಭೀತಿ ಸೃಷ್ಟಿಸಿದೆ.


ದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣ ಟರ್ಮಿನಲ್ 3 ಯಲ್ಲಿ ಅನುಮಾನಸ್ಪದ ಬ್ಯಾಗ್ ಒಂದು ಪತ್ತೆಯಾಗಿದ್ದು ಪೊಲೀಸರು ಕೂಲಂಕುಷವಾಗಿ ತನಿಖೆ ನಡೆಸುತ್ತಿದ್ದಾರೆ.

ಈ ನಡುವೆ ಭಾನುವಾರ ಇಲ್ಲಿ ಟಿ20 ಪಂದ್ಯವಾಡಲಿರುವ ಭಾರತೀಯ ಕ್ರಿಕೆಟಿಗರ ಮೇಲೆ ಲಷ್ಕರ್ ಉಗ್ರರು ದಾಳಿ ನಡೆಸಬಹುದು ಎಂದು ಎನ್ ಐಎಗೆ ಪತ್ರ ಬಂದಿದ್ದು, ಅದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಕ್ರಿಕೆಟಿಗರಿಗೂ ಭದ್ರತೆ ಹೆಚ್ಚಿಸಲಾಗಿದೆ. ದೆಹಲಿಯಾದ್ಯಂತ ಕಟ್ಟೆಚ್ಚರವಹಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೆಲಿಕಾಂ ಕಂಪೆನಿಗಳು ಆರ್ಥಿಕ ನಷ್ಟಕ್ಕೊಳಗಾಗುವುದನ್ನು ತಡೆಯಲು ಸರ್ಕಾರದಿಂದ ಹೊಸ ಯೋಜನೆ