Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ವಿದೇಶದಲ್ಲಿ ಕಿಡ್ನಿ ಕಸಿ ಮಾಡಿಕೊಳ್ಳಲು ಬಿಲ್ ಕುಲ್ ಒಪ್ಪಿರಲಿಲ್ಲವಂತೆ ಸುಷ್ಮಾ ಸ್ವರಾಜ್! ಕಾರಣವೇನು ಗೊತ್ತಾ?

ವಿದೇಶದಲ್ಲಿ ಕಿಡ್ನಿ ಕಸಿ ಮಾಡಿಕೊಳ್ಳಲು ಬಿಲ್ ಕುಲ್ ಒಪ್ಪಿರಲಿಲ್ಲವಂತೆ ಸುಷ್ಮಾ ಸ್ವರಾಜ್! ಕಾರಣವೇನು ಗೊತ್ತಾ?
ನವದೆಹಲಿ , ಬುಧವಾರ, 6 ನವೆಂಬರ್ 2019 (08:59 IST)
ನವದೆಹಲಿ: ಮಾಜಿ ವಿದೇಶಾಂಗ ಸಚಿವೆ, ದಿವಂಗತ ಸುಷ್ಮಾ ಸ್ವರಾಜ್ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗೊಳಗಾಗಲು ವಿದೇಶಕ್ಕೆ ಹೋಗಲು ಬಿಲ್ ಕುಲ್ ಒಪ್ಪಿರಲಿಲ್ಲವಂತೆ. ಹೀಗಂತ ಅವರ ಪತಿ ಸ್ವರಾಜ್ ಕೌಶಲ್ ಬಹಿರಂಗಪಡಿಸಿದ್ದಾರೆ.


ತಮ್ಮ ಟ್ವಿಟರ್ ಪೇಜ್ ಮೂಲಕ ಪತ್ನಿಯನ್ನು ಸ್ಮರಿಸಿಕೊಂಡಿರುವ ಸ್ವರಾಜ್ ಕೌಶಲ್, ‘ಅವರಿಗೆ ಕಿಡ್ನಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ವಿದೇಶಕ್ಕೆ ಹೋಗಲು ವೈದ್ಯರು ಸಲಹೆ ನೀಡಿದ್ದರು. ಆದರೆ ಅವರು ಒಪ್ಪಿರಲಿಲ್ಲ. ತಾನು ಹಾಗೆ ಮಾಡಿದರೆ ತಪ್ಪು ಸಂದೇಶ ನೀಡಿದಂತಾಗುತ್ತದೆ. ನಮ್ಮ ದೇಶದ ವೈದ್ಯರ ಮೇಲೆ ನಾವೇ ನಂಬಿಕೆ ಇಡದಿದ್ದರೆ ಹೇಗೆ ಎಂದು ಸುಷ್ಮಾ ಹೇಳಿದ್ದರು.

ಬಳಿಕ ಏಮ್ಸ್ ವೈದ್ಯ ಡಾ. ಮುಕುತ್ ಮಿಂಜ್ ಅವರಲ್ಲಿ ‘ಡಾಕ್ಟ್ರೇ ನೀವು ಸರ್ಜರಿ ಬ್ಲೇಡ್ ಹಿಡ್ಕೊಳ್ಳಿ. ಉಳಿದಿದ್ದನ್ನು ಆ ಭಗವಂತ ಕೃಷ್ಣನೇ ಮಾಡ್ತಾನೆ’ ಎಂದು ವೈದ್ಯರಿಗೇ ಧೈರ್ಯ ತುಂಬಿದ್ದರಂತೆ ಸುಷ್ಮಾ! ಕೊನೆಗೂ ಅವರ ಹಠದಂತೇ ಏಮ್ಸ್ ನಲ್ಲೇ ಶಸ್ತ್ರಚಿಕಿತ್ಸೆ ಮಾಡಲಾಯಿತು ಎಂದು ಸ್ವರಾಜ್ ತಮ್ಮ ಟ್ವಿಟರ್ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದೆಹಲಿಯಲ್ಲಿ ಪೊಲೀಸರ ಪ್ರತಿಭಟನೆ; ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ಕಾಂಗ್ರೆಸ್