ವಿಚ್ಚೇದನಕ್ಕೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ದಂಪತಿ ಇನ್ನುಮುಂದೆ 18 ತಿಂಗಳು ಕಾಯಬೇಕಾದ ಅಗತ್ಯವಿಲ್ಲ. ವಿಚ್ಚೇಧನಕ್ಕೆ ಕಾಯುವಿಕೆ ಅವಧಿಯನ್ನ 6 ತಿಂಗಳು ಕಡಿತಗೊಳಿಸಬಹುದು ಎಂದು ಸುಪ್ರೀಂಕೋರ್ಟ್ ಹೇಳಿದೆ.
ಹಿಂದೂ ವಿವಾಹ ಕಾಯ್ದೆ ಅನ್ವಯ ವಿಚ್ಚೇದನಕ್ಕೆ 18 ತಿಂಗಳು ದಂಪತಿ ಕಾಯುವ ನಿಯಮದ ಬಗ್ಗೆ ವಿವರಣೆ ನೀಡಿದ ಜಸ್ಟೀಸ್ ಆದರ್ಶ್ ಕೆ ಗೋಯಲ್ ಮತ್ತು ಉದಯ್ ಯು ಲಲಿತ್ ಅವರನ್ನೊಳಗೊಂಡ ವಿಭಾಗೀಯ ಪೀಠ, ಪರಸ್ಪರ ಒಪ್ಪಿಗೆ ಮೇರೆಗೆ ದಂಪತಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದರೆ ವಿಚ್ಚೇದನಕ್ಕೆ ಕಾಯುವ 18 ತಿಂಗಳ ಅವಧಿಯಲ್ಲಿ 6 ತಿಂಗಳು ಕಡಿತಗೊಳಿಸಬಹುದು ಎಂದು ಆದೇಶಿಸಿದೆ.
1976ರಲ್ಲಿ ಹಿಂದೂ ವಿವಾಹ ಕಾಯಿದೆಯಲ್ಲಿ ಸೇರಿಸಿರುವ ಸೆಕ್ಷನ್ 13B ಅನ್ವಯ ದಂಪತಿ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಚೇಧನಾ ಕೋರಿದ್ದರೆ 18 ತಿಂಗಳ ಮುಂಚಿತವಾಗಿಯೇ ವಿಚ್ಛೇದನವನ್ನು ನೀಡಬಹುದು ಎಂದು ಕೋರ್ಟ್ ಹೇಳಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ