ಸಿದ್ದಗಂಗಾ ಶ್ರೀ ನಮ್ಮ ಪಾಲಿನ ಸುಪ್ರೀಂಕೋರ್ಟ್ ಇದ್ದಂತೆ ಎಂದು ಪೌರಾಡಳಿತ ಖಾತೆ ಸಚಿವ ಆಶ್ವರ್ ಖಂಡ್ರೆ ಹೇಳಿದ್ದಾರೆ.
ಇಂದು ಸಿದ್ದಗಂಗಾಮಠಕ್ಕೆ ಭೇಟಿ ನೀಡಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ಕಾಂಗ್ರೆಸ್ ಮುಖಂಡರಾದ ಶ್ಯಾಮನೂರು ಶಿವಶಂಕರಪ್ಪ ಮತ್ತು ಈಶ್ವರ್ ಖಂಡ್ರೆ, ಸಿದ್ದಗಂಗಾ ಶ್ರೀಗಳ ಮಾತೇ ಅಂತಿಮ ಎಂದರು.
ವೀರಶೈವ-ಲಿಂಗಾಯುತರಲ್ಲಿ ಯಾವುದೇ ಭೇಧಭಾವ ಇಲ್ಲ ಎಂದು ಶ್ರೀಗಳು ಸ್ಪಷ್ಟೀಕರಣ ನೀಡಿದ್ದಾರೆ. ಸಿದ್ದಗಂಗಾ ಶ್ರೀ ನಮ್ಮ ಪಾಲಿನ ಸುಪ್ರೀಂಕೋರ್ಟ್ ಇದ್ದಂತೆ. ಅವರ ಮಾತೇ ವೇದವಾಕ್ಯ ಎಂದು ಸ್ಪಷ್ಟನೆ ನೀಡಿದರು.
ಸಚಿವ ಎಂ.ಬಿ.ಪಾಟೀಲರನ್ನು ಗಣನೆಗೆ ತೆಗೆದುಕೊಂಡು ಅವರ ಮನವೊಲಿಸುವ ಪ್ರಯತ್ನಿಸುತ್ತೇವೆ. ಅವರೊಂದಿಗೆ ಒಟ್ಟಾಗಿ ಕುಳಿತು ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತೇವೆ ಎಂದರು.
ಒಟ್ಟಿಗೆ ಬಂದ್ರೆ ಮನವಿ ಪುರಸ್ಕರಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇಬ್ಬರನ್ನು ಒಗ್ಗೂಡಿಸಲು ಸಿಎಂ ಪ್ರಯತ್ನಿಸುತ್ತಿದ್ದಾರೆ ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.