ನವದೆಹಲಿ : ಅಪರೇಷನ್ ಕಮಲದ ಬಗ್ಗೆ ಸಿಎಂ ಬಿಎಸ್ ವೈ ಆಡಿಯೋ ವಿಚಾರಕ್ಕೆ ಸಂಬಂಧಿಸಿದಂತೆ ಈ ಆಡಿಯೋವನ್ನು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಸಮ್ಮತಿ ನೀಡಿದೆ ಎನ್ನಲಾಗಿದೆ.
ಸಿಎಂ ಯಡಿಯೂರಪ್ಪ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಮೈತ್ರಿ ಸರ್ಕಾರ ಉರುಳಿಸುವ ಬಗ್ಗೆ ಮಾತನಾಡಿದ ಆಡಿಯೋವನ್ನು ಕಾಂಗ್ರೆಸ್ ಸುಪ್ರೀಂಕೋರ್ಟ್ ನ ಮುಂದಿಟ್ಟಿದ್ದು, ಇದನ್ನು ಅನರ್ಹ ಶಾಸಕರ ಪ್ರಕರಣದಲ್ಲಿ ಪ್ರಮುಖ ಸಾಕ್ಷ್ಯವಾಗಿ ಪರಿಗಣಿಸುವಂತೆ ಮನವಿ ಮಾಡಿದೆ.
ಇದಕ್ಕೆ ನ್ಯಾ. ರಮಣ ನೇತೃತ್ವದ ನ್ಯಾಯಪೀಠ ಸಮ್ಮತಿ ನೀಡಿದ್ದು, ಸಿಜೆಐ ಗಮನಕ್ಕೆ ತಂದು ಹೊಸ ಪೀಠ ರಚನೆಗೆ ಮನವಿ ಮಾಡುತ್ತೇವೆ. ಸಿಜೆಐ ಒಪ್ಪಿದರೆ ನಾಳೆ ಮತ್ತೆ ವಿಚಾರಣೆ ಕೈಗೆತ್ತಿಕೊಳ್ಳುತ್ತೇವೆ, ಸಾಕ್ಷಿಯಾಗಿ ಪರಿಗಣಿಸುತ್ತೇವೆ ಎಂದು ಹೇಳಿದ್ದಾರೆ. ಇದು ಈಗ ಸಿಎಂ ಯಡಿಯೂರಪ್ಪ ಹಾಗೂ ಅನರ್ಹ ಶಾಸಕರ ಸಂಕಷ್ಟಕ್ಕೆ ಕಾರಣವಾಗಿದೆ ಎನ್ನಲಾಗಿದೆ.